ಮಾಣಿಯೂರು ಮಠಕ್ಕೆ ಪುತ್ತಿಗೆ ಶ್ರೀ ಭೇಟಿ.

ಉಡುಪಿ: ನಾಲ್ಕನೇ ಬಾರಿಗೆ ಪರ್ಯಾಯ ಪೀಠಾರೋಹಣ ಏರಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ತಮ್ಮ ಜನ್ಮಭೂಮಿ ಮಾಣಿಯೂರು ಮಠಕ್ಕೆ ಇಂದು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಪುತ್ತಿಗೆ ಶ್ರೀಪಾದರು ತಾನು ಕಲಿತ ಕೆಮುಂಡೇಲು ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿದರು.
ಕೆಮುಂಡೇಲು ಪಾಂಡುರಂಗ ಭಜನಾ ಮಂಡಳಿಯಲ್ಲಿ ಪಾಂಡುರಂಗ ದೇವರಿಗೆ ಮಂಗಳಾರತಿ ಮಾಡಿ ಪುತ್ತಿಗೆ ಶ್ರೀಪಾದರು, ತಮ್ಮ ತಂದೆಯವರು ಈ ದೇವರಿಗೆ ಪೂಜೆ ಮಾಡಿದನ್ನು ಸ್ಮರಿಸಿಕೊಂಡರು.

ಹಾಗೆಯೇ ತಮ್ಮ ನಾಲ್ಕನೇ ಪಾರ್ಯಾಯಕ್ಕೆ ಎಲ್ಲರನ್ನು ಆಹ್ವಾನಿಸಿದರು. ಆ ಬಳಿಕ ಕೆಮುಂಡೇಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕೆಮುಂಡೇಲು ಪಾಂಡುರಂಗ ಭಜನಾ ಮಂಡಳಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಮುದರಂಗಡಿ ಇವರ ವತಿಯಿಂದ ಹಮ್ಮಿಕೊಂಡಿದ್ದ ಗೌರಭಿವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪುತ್ತಿಗೆ ಶ್ರೀಗಳು ಗೌರಭಿವಂದನೆ ಸ್ವೀಕರಿಸಿ, ಆಶೀರ್ವಚನ ನೀಡಿದರು