ಅಯೋಧ್ಯೆಯಲ್ಲಿ ಕರ್ನಾಟಕ ಭವನ ನಿರ್ಮಿಸಲು ಮುಖ್ಯಮಂತ್ರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ

ಉಡುಪಿ: ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಭೇಟಿ ನೀಡುವ ರಾಜ್ಯದ ಕೋಟ್ಯಾಂತರ ಭಕ್ತರ ಅನುಕೂಲಕ್ಕಾಗಿ ರಾಜ್ಯ ಸರಕಾರ ಸುಸಜ್ಜಿತ ಕರ್ನಾಟಕ ಭವನ ನಿರ್ಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಗೆ ಹಾಗೂ ಭವ್ಯ ರಾಮ ಮಂದಿರದ ಉದ್ಘಾಟನೆಗೆ ಈಗಾಗಲೇ ವಿಶ್ವದೆಲ್ಲೆಡೆ ದಿನಗಣನೆ ಶುರುವಾಗಿದೆ. ಶ್ರೀ ರಾಮ ಮಂದಿರದ ನಿರ್ಮಾಣದ ಇತಿಹಾಸಗಳ ಕೋಟ್ಯಾಂತರ ಭಾರತೀಯರ ಕನಸು ಸಾಕಾರವಾಗುತ್ತಿದ್ದು, ಅಯೋಧ್ಯೆಯು ಮುಂದಿನ ದಿನಗಳಲ್ಲಿ ಕೋಟ್ಯಾಂತರ ಭಕ್ತಾಧಿಗಳ ಪಾಲಿಗೆ […]

ಕಾರ್ಕಳ: ಶಬರಿಮಲೆಯಲ್ಲಿ ನಾಪತ್ತೆಯಾಗಿದ್ದ ಅಯ್ಯಪ್ಪ ಮಾಲಾಧಾರಿ ಪತ್ತೆ

ಕಾರ್ಕಳ: ಶಬರಿಮಲೆಗೆ ಹೋಗಿದ್ದ ಅಯ್ಯಪ್ಪ ಮಾಲಾಧಾರಿ ಆದಿತ್ಯ ಶೆಟ್ಟಿಗಾರ್ ಎಂಬವರು ಅಯ್ಯಪ್ಪನ ದರ್ಶನ ಪಡೆದು ಮರಳುವಾಗ ವಿಪರೀತ ಜನಸಂದಣಿಯಿಂದ ಬುಧವಾರ ಮುಂಜಾನೆಯಿಂದ ನಾಪತ್ತೆಯಾಗಿದ್ದರು. ಇದೀಗ ಅವರು ಪತ್ತೆಯಾಗಿದ್ದು ಊರಿನತ್ತ ಮರಳಿ ಬರುತ್ತಿದ್ದಾರೆ ಎಂದು ಜೋಗಿನಕೆರೆ ಅಯ್ಯಪ್ಪ ಸೇವಾ ಸಮಿತಿಯ ಗುರು ಸ್ವಾಮಿ ಖಚಿತಪಡಿಸಿದ್ದಾರೆ‌. ಅಯ್ಯಪ್ಪ ಮಾಲಾಧಾರಿಯಾಗಿದ್ದ ಆದಿತ್ಯ ಶೆಟ್ಟಿಗಾರ್ ತನ್ನ ಇತರ ಸಹವರ್ತಿ ಅಯ್ಯಪ್ಪ ಮಾಲಾಧಾರಿಗಳ ಜತೆಗೂಡಿ ಕಾರ್ಕಳ ಜೋಗಿನಕೆರೆ ಅಯ್ಯಪ್ಪ ಶಿಬಿರದಿಂದ ಶಬರಿಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಪಡೆದು ಮರಳಿ ಬರುವಾಗ ಶಬರಿಮಲೆಯಲ್ಲಿ ಭಕ್ತಾದಿಗಳ ದಟ್ಟಣೆಯಿಂದ […]

ಉಡುಪಿ ಪರ್ಯಾಯ ಮಹೋತ್ಸವ: ಉಡುಪಿಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ.

ಉಡುಪಿ, ಜ.11: ಜಿಲ್ಲೆಯ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಪರ್ಯಾಯ ಮಹೋತ್ಸವದ ಹಿನ್ನೆಲೆ, ಉಡುಪಿ ನಗರ ವ್ಯಾಪ್ತಿಯಲ್ಲಿ ಜನವರಿ 17 ಮತ್ತು 18 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದರಿಂದ ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಹಿನ್ನಲೆ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮ 1989 ರ ನಿಯಮ 221 5(ಎ)ರ ಅನ್ವಯ ಈ ಕೆಳಕಂಡ ರಸ್ತೆಗಳಿಗೆ ಬದಲಿ ಮಾರ್ಗ ಹಾಗೂ ವಾಹನ […]

ಮಾಣಿಯೂರು ಮಠಕ್ಕೆ ಪುತ್ತಿಗೆ ಶ್ರೀ ಭೇಟಿ.

ಉಡುಪಿ: ನಾಲ್ಕನೇ ಬಾರಿಗೆ ಪರ್ಯಾಯ ಪೀಠಾರೋಹಣ ಏರಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ತಮ್ಮ ಜನ್ಮಭೂಮಿ ಮಾಣಿಯೂರು ಮಠಕ್ಕೆ ಇಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪುತ್ತಿಗೆ ಶ್ರೀಪಾದರು ತಾನು ಕಲಿತ ಕೆಮುಂಡೇಲು ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿದರು.ಕೆಮುಂಡೇಲು ಪಾಂಡುರಂಗ ಭಜನಾ ಮಂಡಳಿಯಲ್ಲಿ ಪಾಂಡುರಂಗ ದೇವರಿಗೆ ಮಂಗಳಾರತಿ ಮಾಡಿ ಪುತ್ತಿಗೆ ಶ್ರೀಪಾದರು, ತಮ್ಮ ತಂದೆಯವರು ಈ ದೇವರಿಗೆ ಪೂಜೆ ಮಾಡಿದನ್ನು ಸ್ಮರಿಸಿಕೊಂಡರು. ಹಾಗೆಯೇ ತಮ್ಮ ನಾಲ್ಕನೇ ಪಾರ್ಯಾಯಕ್ಕೆ ಎಲ್ಲರನ್ನು ಆಹ್ವಾನಿಸಿದರು. ಆ ಬಳಿಕ ಕೆಮುಂಡೇಲು ಅನುದಾನಿತ […]

ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹೊರಕಾಣಿಕೆ ಸಮರ್ಪಣೆ

ಉಡುಪಿ: ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಐತಿಹಾಸಿಕ ಚತುರ್ಥ ಪರ್ಯಾಯೋತ್ಸವದ ಅಂಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಇಂದು ಹೊರಕಾಣಿಕೆಯನ್ನು ಸಮರ್ಪಿಸಲಾಯಿತು. ಉಡುಪಿ ಜೋಡುಕಟ್ಟೆಯಲ್ಲಿ ಹೊರಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಜೋಡುಕಟ್ಟೆಯಿಂದ ಆರಂಭಗೊಂಡ ಹೊರಕಾಣಿಕೆ ಮೆರವಣಿಗೆ ಹಳೆ ಡಯಾನ, ಕೆಎಂ ಮಾರ್ಗ, ತ್ರಿವೇಣಿ ಸರ್ಕಲ್, ಸಂಸ್ಕೃತ ಕಾಲೇಜು ಮೂಲಕ ಮುಖ್ಯ ರಸ್ತೆಯಲ್ಲಿ ಪುತ್ತಿಗೆ ಮಠಕ್ಕೆ ಸಾಗಿ ಬಂತು. ತಟ್ಟಿರಾಯ, ನಾಸಿಕ್ ಬ್ಯಾಂಡ್, ವಾದ್ಯ, ಚಂಡೆ, ಸಿಡಿಮದ್ದು, ಮಹಿಳಾ ಭಜನಾ ತಂಡಗಳು ಮೆರವಣಿಗೆಯ ಮೆರುಗನ್ನು […]