ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ – ಓರ್ವ ಪೊಲೀಸರ ವಶಕ್ಕೆ.

ಮಣಿಪಾಲ: ಉಡುಪಿ ನಗರದ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತ ವ್ಯಕ್ತಿ ಕೇರಳದ ಅಹದ್‌ ಅಬ್ದುಲ್ಲಾ ಶಮೀಮ್‌ ಕೋಝಿಕೋಡ್‌ ಎಂದು ಗುರುತಿಸಲಾಗಿದೆ.

ಫಾರೆನ್ಸಿಕ್‌ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.