ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ – ಓರ್ವ ಪೊಲೀಸರ ವಶಕ್ಕೆ.

ಮಣಿಪಾಲ: ಉಡುಪಿ ನಗರದ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತ ವ್ಯಕ್ತಿ ಕೇರಳದ ಅಹದ್‌ ಅಬ್ದುಲ್ಲಾ ಶಮೀಮ್‌ ಕೋಝಿಕೋಡ್‌ ಎಂದು ಗುರುತಿಸಲಾಗಿದೆ. ಫಾರೆನ್ಸಿಕ್‌ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14ನೇ ವರ್ಷದ ಜಪ್ಪಿನಮೊಗರು “ಜಯ – ವಿಜಯ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಮಂಗಳೂರು: ಫೆ.10 ರಂದು ನಡೆದ 14ನೇ ವರ್ಷದ ಜಪ್ಪಿನಮೊಗರು “ಜಯ – ವಿಜಯ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ: ಕನೆಹಲಗೆ: 06 ಜೊತೆ ಅಡ್ಡಹಲಗೆ: 05 ಜೊತೆ ಹಗ್ಗ ಹಿರಿಯ: 13 ಜೊತೆ ನೇಗಿಲು ಹಿರಿಯ: 28 ಜೊತೆ ಹಗ್ಗ ಕಿರಿಯ: 16 ಜೊತೆ ನೇಗಿಲು ಕಿರಿಯ: 70 ಜೊತೆ ಒಟ್ಟು ಕೋಣಗಳ ಸಂಖ್ಯೆ: 138 ಜೊತೆ ಕನೆಹಲಗೆ: (ಸಮಾನ ಬಹುಮಾನ) ಬೋಳಾರ ತ್ರಿಶಾಲ್ ಕೆ ಪೂಜಾರಿ ಹಲಗೆ ಮುಟ್ಟಿದವರು: […]

ಮಣಿಪಾಲ: “ನಾರಿ ಶೃಂಗ” ಪೂರ್ವಪ್ರಾಥಮಿಕ ಬೋಧನಾ ಸಾಧನಗಳ ಪ್ರದರ್ಶನ ಉದ್ಘಾಟಿಸಿದ ಡಾ.ಪುಷ್ಪಾ ಕಿಣಿ

ಮಣಿಪಾಲ: ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಕ್ರಿಸ್ಟಲ್ ಬಿಜ್‍ಹಬ್, ಒಂದನೇ ಮಹಡಿ, ಡಿಸಿ ಕಛೇರಿ ಬಳಿ, ಮಣಿಪಾಲ, ಪೂರ್ವಪ್ರಾಥಮಿಕ ಶಾಲಾ ಶಿಕ್ಷಕಿಯರಿಗೆ “ನಾರಿ ಶೃಂಗ”ಎಂಬ ಶೀರ್ಷಿಕೆಯ ಅಡಿಯಲ್ಲಿ ಬೋಧನಾ ಸಾಧನಗಳ ಪ್ರದರ್ಶನವನ್ನು ಕೆ.ಎಂ.ಸಿ.ಯ ಮಕ್ಕಳ ವಿಭಾಗದ ಮಕ್ಕಳ ತಜ್ಞೆ ಡಾ. ಪುಷ್ಪಾ ಕಿಣಿ ಅವರು ಫೆ.10 ರಂದು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಕ್ಕಳೊಂದಿಗೆ ಬೆರೆತು, ಪ್ರಯೋಗಿಕ ವಸ್ತುಗಳ ನೆರವಿನಿಂದ ಮಾಹಿತಿ ನೀಡಬೇಕು. ಈ ಆಧುನಿಕ ಯುಗದಲ್ಲಿ ಪೂರ್ವಪ್ರಾಥಮಿಕ ವಿದ್ಯಾರ್ಥಿಗಳಿಗೂ ಒತ್ತಡ ನಿರ್ವಹಣಾ ತಂತ್ರಗಳ ಬಳಕೆ […]

ಹಳೆಯಂಗಡಿ: ರಾಜ್ಯ ಮಟ್ಟದ ದಫ್ ಸ್ಪರ್ಧೆ – ಮಣಿಪುರ ದಫ್ ತಂಡಕ್ಕೆ ಚಾಂಪಿಯನ್ ಪ್ರಶಸ್ತಿ

ಮಂಗಳೂರು: ಫೆ.10 ರಂದು ಹಳೆಯಂಗಡಿ ಕದಿಕೆಯಲ್ಲಿ ಉರೂಸ್ ಪ್ರಯುಕ್ತ ನಡೆದ ರಾಜ್ಯ ಮಟ್ಟದ ದಫ್ ಸ್ಪರ್ಧೆಯಲ್ಲಿ ಉಡುಪಿ ಕಟಪಾಡಿಯ ಖಲಂದರ್ ಷಾ ದಫ್ ಸಮಿತಿ ಮಣಿಪುರ ತಂಡ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿತು ಹಾಗೂ ಉತ್ತಮ ಹಾಡುಗಾರ ಪ್ರಶಸ್ತಿಯು ತನ್ನದಾಗಿಸಿಕೊಂಡಿದೆ. ಸ್ಪರ್ಧೆಯಲ್ಲಿ ರಾಜ್ಯದ ಒಟ್ಟು14 ತಂಡಗಳು ಭಾಗವಹಿಸಿದ್ದವು.