ಮಣಿಪಾಲ: ವ್ಯಕ್ತಿ ನಾಪತ್ತೆ.

ಮಣಿಪಾಲ: ಉಡುಪಿ- ಮಣಿಪಾಲ ಭಾಗದಲ್ಲಿ ಪರೋಟ ಮಾರಾಟ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ.

ನಾಪತ್ತೆಯಾಗಿರುವ ವ್ಯಕ್ತಿ ಮಹೇಶ್‌ (43). ಇವರು ಮನೆಯಲ್ಲಿಯೇ ಪರೋಟ ತಯಾರಿಸಿ ಉಡುಪಿ-ಮಣಿಪಾಲದ ಹೊಟೇಲ್‌ಗ‌ಳಿಗೆ ಮಾರಾಟ ಮಾಡಿಕೊಂಡಿದ್ದರು.

ಜೂ. 5ರಂದು ಬೆಳಗ್ಗೆ ಸ್ಕೂಟರ್‌ನಲ್ಲಿ ಮಣಿಪಾಲಕ್ಕೆ ಪರೋಟಾ ಮಾರಾಟ ಮಾಡಲು ತನ್ನ ಮನೆಯಿಂದ ಹೊರಟು ಮಣಿಪಾಲ ಆಸ್ಪತ್ರೆಯ ಕ್ಯಾಂಟೀನ್‌ಗೆ ಪರೋಟ ನೀಡಿ ಸ್ಕೂಟರ್‌ ಅನ್ನು ಅಲ್ಲಿಯೇ ನಿಲ್ಲಿಸಿ ಹೋದವರು ನಾಪತ್ತೆಯಾಗಿದ್ದಾರೆ.

ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.