ಮಣಿಪಾಲ: ವಿದ್ಯಾರ್ಥಿಗಳಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ ಯುವಕ ಅರೆಸ್ಟ್.

ಉಡುಪಿ: ಗಾಂಜಾ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಅಪಾರ್ಟ್‌ಮೆಂಟ್‌ಗೆ ದಾಳಿ ಮಾಡಿದ ಮಣಿಪಾಲ ಪೊಲೀಸರು ಹೋಟೆಲ್ ಮ್ಯಾನೇಜೈಂಟ್ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.

ಬಂಧಿತ ವಿದ್ಯಾರ್ಥಿಯನ್ನು ತಿರುವನಂತಪುರದ ಸಿದ್ದಾರ್ಥ (22) ಎಂದು ಗುರುತಿಸಲಾಗಿದೆ.

ಈತ ವಾಸಿಸುತ್ತಿದ್ದ ವಸತಿಗೃಹಕ್ಕೆ ದಾಳಿ ಮಾಡಿದ ಪೊಲೀಸರು, 20,000 ರೂ ಮೌಲ್ಯದ ಸುಮಾರು 388 ಗ್ರಾಂ ತೂಕದ ಗಾಂಜಾ ಹಾಗೂ 45,000 ರೂ ಮೌಲ್ಯದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ಗಾಂಜಾವನ್ನು ಶೇಖರಿಸಿ ಇಟ್ಟಿರುವುದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.