ಮಣಿಪಾಲ: ಮದ್ಯ ಮಾರಾಟ – ಇಬ್ಬರು ಪೊಲೀಸರ ವಶಕ್ಕೆ.

ಮಣಿಪಾಲ: ಮದ್ಯ ಮಾರಾಟ ಮಾಡುತ್ತಿದ್ದ ಅಬ್ದುಲ್‌ ರಜಾಕ್‌ (26), ಮುದುಕಪ್ಪ (39) ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಚುನಾವಣೆ ನಿಮಿತ್ತ ಮದ್ಯಮಾರಾಟ ನಿಷೇಧವಿದ್ದರೂ 80 ಬಡಗಬೆಟ್ಟುವಿನ ಅಪಾರ್ಟ್‌ಮೆಂಟ್‌ವೊಂದರ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಇವರಿಬ್ಬರು ಅಕ್ರಮವಾಗಿ ಮದ್ಯಮಾರಾಟ ಮಾಡಿಕೊಂಡಿದ್ದರು.

ಅಬ್ದುಲ್‌ ರಜಾಕ್‌ನ ಬಳಿ ಇದ್ದ ಮದ್ಯ ತುಂಬಿದ 60 ಟೆಟ್ರಾ ಪ್ಯಾಕೆಟ್‌ ಹಾಗೂ ಮುದುಕಪ್ಪನ ಬಳಿ ಇದ್ದ 15 ಟೆಟ್ರಾ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.