ಮಣಿಪಾಲ: “ನಾರಿ ಶೃಂಗ” ಪೂರ್ವ ಪ್ರಾಥಮಿಕ ಬೋಧನಾ ಸಾಧನಗಳ ಪ್ರದರ್ಶನ

ಮಣಿಪಾಲ: ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಣಿಪಾಲ ಈ ಸಂಸ್ಥೆಯ ವತಿಯಿಂದ ಪೂರ್ವಪ್ರಾಥಮಿಕ ಶಾಲಾ ಶಿಕ್ಷಕಿಯರಿಗೆ ಫೆ.10 ಶನಿವಾರ ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಕ್ರಿಸ್ಟಲ್ ಬಿಜ್‍ಹಬ್, ಒಂದನೇ ಮಹಡಿ, ಡಿಸಿ ಕಛೇರಿ ಬಳಿ, ಮಣಿಪಾಲ, ಇಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ “ನಾರಿ ಶೃಂಗ” ಎಂಬ ಶೀರ್ಷಿಕೆಯ ಆಡಿಯಲ್ಲಿ ಬೋಧನಾ ಸಾಧನಗಳ ಪ್ರದರ್ಶನವನ್ನು ಕೆ.ಎಂ.ಸಿಯ ಮಕ್ಕಳ ವಿಭಾಗದ ಪ್ರೊಫೆಸರ್ ಡಾ. ಪುಷ್ಪ ಕಿಣಿಯವರು ಉದ್ಘಾಟಿಸಲಿದ್ದಾರೆ.

ಈ ಪ್ರದರ್ಶನವು ಕಲಿಕಾ ಕೌಶಲ್ಯ ಮತ್ತು ತರಗತಿಯ ತಂತ್ರಗಳನ್ನು ಹೆಚ್ಚಿಸುವ ನವೀನ ಮತ್ತು ಸೃಜನಶೀಲ ಬೋಧನಾ ಸಾಧನಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ.

ಆಸಕ್ತ ಶಿಕ್ಷಕಿಯರು ಹಾಗೂ ಶಿಕ್ಷಕಿಯರಾಗ ಬಯಸುವವರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಸುನೀತಾರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.