ಮಣಿಪಾಲದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕರಿಸುವ ನೇರ ಪ್ರಸಾರ ಕಾರ್ಯಕ್ರಮ.

ಮಣಿಪಾಲ: ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ, ಮಣಿಪಾಲ ವಾರ್ಡ್ ನಗರಸಭಾ ಸದಸ್ಯೆ ಶ್ರೀಮತಿ ಕಲ್ಪನಾ ಸುಧಾಮ ಹಾಗೂ ಮಣಿಪಾಲ ವಾರ್ಡಿನ ಕಾರ್ಯಕರ್ತರ ನೇತೃತ್ವದಲ್ಲಿ ಟೈಗರ್ ಸರ್ಕಲ್, ಬಸ್ ನಿಲ್ದಾಣ ಬಳಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕರಿಸುವ ಸಂಪೂರ್ಣ ನೇರ ಪ್ರಸಾರ ಎಲ್ಇಡಿ ಪರದೆಯ ಮೂಲಕ ನೇರಪ್ರಸಾರ ಮತ್ತು ಸಿಹಿ ತಿಂಡಿ, ಪಟಾಕಿ ಸಿಡುಮದ್ದು ಪ್ರದರ್ಶನ, ಹಾಗೂ ಮೋದಿ ಚಹಾ ವಿತರಣೆ ಕಾರ್ಯಕ್ರಮ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಹೆರ್ಗ ದಿನಕರ್ ಶೆಟ್ಟಿ, ನಗರ ಪ್ರಧಾನ ಕಾರ್ಯದರ್ಶಿಯಾದ ಜಗದೀಶ್ ಆಚಾರ್ಯ ಕಾಪೆಟ್ಟು, ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯರಾದ ಶ್ಯಾಮಲ ಕುಂದರ್, ನಗರ ಕಾರ್ಯದರ್ಶಿಯಾದ ಗುರುರಾಜ್ ಸರಳೇಬೆಟ್ಟು, ಉಡುಪಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷರಾದ ಸುಮಿತ್ರ ನಾಯಕ್ ಪರ್ಕಳ, ನಗರಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ, ವಿಜಯಲಕ್ಷ್ಮಿ ಸರಳೇಬೆಟ್ಟು , ಮಹಿಳಾ ಮೋರ್ಚಾ ನಗರಾಧ್ಯಕ್ಷರಾದ ಅಶ್ವಿನಿ ಆರ್ ಶೆಟ್ಟಿ ಹಾಗೂ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ನಗರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ನಿತಿನ್ ಪೈ, ಯುವಮೋರ್ಚಾ ವಕ್ತಾರದ ಪ್ರಣವ್ ಕಾಮತ್, ಮಾಜಿ ನಗರಸಭಾ ಸದಸ್ಯರಾದ ನರಸಿಂಹ ನಾಯಕ್, ದೇವೇಂದ್ರ ಪ್ರಭು ಹಾಗೂ ಪಕ್ಷದ ಹಿರಿಯರು, ಮಣಿಪಾಲ ವಾರ್ಡ್ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.