ಮಂಗಳೂರು: ಡಾ.ಶೈಲೇಶ್ ಪ್ರಭು ಎನ್. ಅವರಿಗೆ ಪಿಎಚ್ ‌ಡಿ ಪ್ರದಾನ

ಮಂಗಳೂರು: ಫೆಬ್ರ ವರಿ 11, 2025 ರಂದು ಡಾ.ಶೈಲೇಶ್ ಪ್ರಭು ಎನ್ ತಮ್ಮ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್ ‌ಡಿ) ಅನ್ನು ಮಾರ್ಕೆಟಿಂಗ್ ನಿರ್ವಹಣೆ (Marketing Management) ಎಂಬ ವಿಷಯದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇವರು ಪಿಎಚ್ ‌ಡಿ ಅಧ್ಯ ಯನವನ್ನು ಎನ್ . ಐ. ಟಿ. ಕೆ. ಸುರತ್ಕ ಲ್ ನಲ್ಲಿ ಪ್ರೊ . ರಿತಾಂಜಲಿ ಮಾಜಿ ಅವರ ಮಾರ್ಗದರ್ಶನದಲ್ಲಿ ಪೂರೈಸಿದ್ದಾರೆ. ಸುಸ್ಥಿರ ಭವಿಷ್ಯ ದ ಕಡೆಗೆ: ಕರ್ನಾಟಕದಲ್ಲಿ ಮೊಬೈಲ್ ಫೋನ್ ವಿಲೇವಾರಿ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವುದು” (Towards Sustainable Future:Understanding Mobile Phone Disposal Behaviour in Karnataka ) ಎಂಬ ಶೀರ್ಷಿಕೆಯಲ್ಲಿ ಸಂಶೋಧನೆಯನ್ನು ನಡೆಸಿ ಸುಸ್ಥಿರ ಮಾರ್ಕೆಟಿಂಗ್ ಮತ್ತು ಗ್ರಾ ಹಕರ ನಡವಳಿಕೆಯ ಬಗ್ಗೆ ವ್ಯಾ ಪಕವಾದ ಅಧ್ಯಯನವನ್ನು ನಡೆಸಿದರು.

ಇವರು ಎಂ. ಬಿ. ಎ ಪದವಿಯನ್ನು ಹೈದರಾಬಾದಿನ ಪ್ರ ತಿಷ್ಠಿತ ಸಂಸ್ಥೆ ಐಬಿಎಸ್ ನಿಂದ ಪಡೆದಿರುತ್ತಾರೆ ಹಾಗೂ ಯು.ಜಿ. ಸಿ.-ಎನ್.ಇ .ಟಿ. ಪರೀಕ್ಷೆಯಲ್ಲಿ ತೇರ್ಗಡೆಗೊಂಡಿರುತ್ತಾರೆ . 2024 ರಲ್ಲಿ ಸ್ಪಾರ್ಕ್ ಸಂಶೋಧನಾ ಯೋಜನೆಯ ಭಾಗವಾಗಿ ಎಸ್ಸೆಕ್ಸ್ ಬ್ಯುಸಿನೆಸ್ ಸ್ಕೂಲ್ , ಯು. ಕೆ .ಗೆ ಭೇಟಿ ನೀಡಿರುತ್ತಾರೆ. ಕಾಸರಗೋಡಿನ ನೀಲೇಶ್ವರದ ವೆಂಕಟೇಶ್ ಪ್ರ ಭು ಎನ್ ಮತ್ತು ವರಲಕ್ಷ್ಮಿ ಪ್ರ ಭು ಎನ್. ಅವರ ಸುಪುತ್ರ. ಹಾಗೂ ಐಸಿಎಐ ಮಂಗಳೂರಿನ ಮಾಜಿ ಅಧ್ಯ ಕ್ಷ ಸಿಎ ಎಸ್.ಎಸ್.ನಾಯಕ್ ಹಾಗೂ ಮಂಗಳೂರಿನ ಪ್ರ ಖ್ಯಾತ ವಿದ್ಯಾ ಸ೦ಸ್ಥೆ ಎಕ್ಸ್ ಪರ್ಟ್ ನ ಅಧ್ಯಕ್ಷರಾದ ನರೇಂದ್ರ ನಾಯಕ್ ರವರ ಸೋದರಳಿಯ.