ಉಡುಪಿ ಸಿವಿಲ್ ಎಂಜಿನಿಯರ್ಸ್ ಎಸೋಸಿಯೇಷನ್ ಉದ್ಘಾಟನೆ ಮತ್ತು ಲಾಂಛನ ಅನಾವರಣ.

ಉಡುಪಿ: ಉಡುಪಿ ಸಿವಿಲ್ ಎಂಜಿನಿಯರ್ಸ್ ಎಸೋಸಿಯೇಶನ್ ಉದ್ಘಾಟನೆಯನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ಶನಿವಾರ ನೆರವೇರಿಸಿದರು. ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆ ನಿವಾರಣೆಯೊಂದಿಗೆ ನಗರ, ಅಭಿವೃದ್ಧಿ ವಿಸ್ತರಣೆ ನಿಟ್ಟಿನಲ್ಲಿ ಶ್ರೀಕೃಷ್ಣ ಕಾರಿಡಾರ್ ಯೋಜನೆಗೆ ಉಡುಪಿ ಸಿವಿಲ್ ಇಂಜಿನಿಯರ್ಸ್ ಎಸೋಸಿಯೇಶನ್ ಸಲಹೆ, ಸೂಚನೆ ನೀಡುವಂತೆ ಉಡುಪಿ ಶಾಸಕ ಯಶಪಾಲ ಸುವರ್ಣ ತಿಳಿಸಿದ್ದಾರೆ. ಅವರು ಹೋಟೆಲ್ ಕಿದಿಯೂರು ಪವನ್ ರೂಫ್ ಟಾಪ್ ಸಭಾಂಗಣದಲ್ಲಿ ಉಡುಪಿ ಸಿವಿಲ್ ಎಂಜಿನಿಯರ್ಸ್ ಎಸೋಸಿಯೇಷನ್ ಉದ್ಘಾಟನೆ ಮತ್ತು ಲಾಂಛನ ಅನಾವರಣ ಮಾಡಿ ಶನಿವಾರ ಮಾತನಾಡಿದರು.ವಿಶ್ವದಲ್ಲೆ ಉಡುಪಿ ಪ್ರಸಿದ್ಧಿ […]
ಉಡುಪಿ:ಆಧಾರ್ ನೋಂದಣಿ, ತಿದ್ದುಪಡಿ ಹಾಗೂ ಬಯೋ ಮೆಟ್ರಿಕ್ ನೋಂದಣಿಗೆ ಅವಕಾಶ

ಉಡುಪಿ: 0-5 ವರ್ಷದ ಒಳಗಿನ ಮಕ್ಕಳ ಹೊಸ ಆಧಾರ್ ನೋಂದಣಿ ಮತ್ತು 5 ವರ್ಷ ಮತ್ತು 15 ವರ್ಷ ಮೇಲ್ಪಟ್ಟ ಮಕ್ಕಳ ಬಯೋ ಮೆಟ್ರಿಕ್ ನೋಂದಣಿ ಮತ್ತು ಆಧಾರ್‌ನಲ್ಲಿ ಮೊಬೈಲ್ ನಂಬರ್ ಸೇರ್ಪಡೆಗೊಳಿಸುವುದು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಬೇಕಿರುದರಿಂದ ತಮ್ಮ ಹತ್ತಿರದ ಆಧಾರ್ ಕೇಂದ್ರಗಳಲ್ಲಿ, ಹತ್ತಿರದ ಅಂಚೆ ಇಲಾಖೆಗೆ ಭೇಟಿ ನೀಡಿ, ನೋಂದಣಿ ಮಾಡಿಕೊಳ್ಳಬಹುದಾಗಿದೆ ಹಾಗೂ ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ಹೊಸ ನೋಂದಣಿ, ತಿದ್ದುಪಡಿ ಮತ್ತು ಬಯೋ ಮೆಟ್ರಿಕ್ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ […]
ಉಡುಪಿ:ಪೈಪ್‌ಲೈನ್ ಬದಲಾವಣೆಯ ಕಾಮಗಾರಿ: ಮಾರ್ಚ್ 3 ರಿಂದ ಮಾರ್ಚ್ 22 ರ ವರೆಗೆ ವಾಹನ ಸಂಚಾರ ನಿಷೇಧ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಅಜ್ಜರಕಾಡು ವಾರ್ಡಿನ ವಿದ್ಯಾರಣ್ಯ ರಸ್ತೆಯಲ್ಲಿ ಅಲಂಕಾರ್ ಟಾಕೀಸ್‌ನಿಂದ ಸಿಟಿ ಆಸ್ಪತ್ರೆ ತನಕ ಒಳಚರಂಡಿ ಜಾಲದ ಪೈಪ್‌ಲೈನ್ ಬದಲಾವಣೆ ಮಾಡಿ ಛೇಂಬರ್ ಪುನರ್ ನಿರ್ಮಾಣ ಕಾಮಗಾರಿಯ ಹಿನ್ನೆಲೆ, ಮಾರ್ಚ್ 3 ರಿಂದ ಮಾರ್ಚ್ 22 ರ ವರೆಗೆ ಸದರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ, ಬದಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರ ಕಛೇರಿ ಪ್ರಕಟಣೆ ತಿಳಿಸಿದೆ.
ಉಡುಪಿ:ವಿಕಲಚೇತನ ಸ್ನೇಹಿ ವಾತಾವರಣ ಸಮಾಜದ ಕರ್ತವ್ಯ: ಶ್ಯಾಮಲಾ ಸಿ.ಕೆ

ಉಡುಪಿ: ಹಿರಿಯ ನಾಗರೀಕರು ಮತ್ತು ವಿಕಲಚೇತನರಿಗೆ ಸರಕಾರ ಮತ್ತು ಸಮಾಜ ಕೊಡಮಾಡುವ ಸೌಲಭ್ಯಗಳು ಅನುಕಂಪವಲ್ಲ, ಅದು ಸಹಾನುಭೂತಿ ವಿಕಲಚೇತನ ಸ್ನೇಹಿ ವಾತಾವರಣವನ್ನು ನಿರ್ಮಾಣ ಮಾಡುವುದು ನಾಗರೀಕ ಸಮಾಜದ ಕರ್ತವ್ಯ. ಈ ದೃಷ್ಟಿಯಿಂದ ಭಾರತ ಸುಗಮ್ಯ ಯಾತ್ರಾ ಕಾರ್ಯಕ್ರಮ ಒಂದು ಮಹತ್ವದ ಹೆಜ್ಜೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಹೇಳಿದರು. ಅವರು ಮಂಗಳವಾರ ನಗರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಂಗಣದಲ್ಲಿ, ಭಾರತೀಯ ರೆಡ್‌ಕ್ರಾಸ್ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, […]
ಉಡುಪಿ:ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ

ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟವು ಮಾರ್ಚ್ 14 ಮತ್ತು 15 ರಂದು ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ರೀಡಾಕೂಟವು ಮಾರ್ಚ್ 14 ರಂದು ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗುವುದು. ಕ್ರೀಡಾಕೂಟದಲ್ಲಿ ಭಾಗವಹಿಸುವ ಸರಕಾರಿ ನೌಕರರು ನಿಗದಿತ ನಮೂನೆಯಲ್ಲಿ ಮಾರ್ಚ್ 10 ರೊಳಗಾಗಿ ಸಹಾಯಕ ನಿದೇಶಕರ ಕಛೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಇವರಿಗೆ ಕಳುಹಿಸಬೇಕು. […]