ಬಿಜೆಪಿ ಸರ್ಕಾರಕ್ಕೆ ದೇಶದ ಸಂವಿಧಾನವೇ ಸರ್ವಸ್ವ: ಪ್ರಧಾನಿ ಮೋದಿ

ಈ ಸಂವಿಧಾನ ನಮಗೆ ಗೀತಾ, ಕುರಾನ್, ಬೈಬಲ್ ಎಲ್ಲವೂ ಆಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಖುದ್ದು ಬಂದರೂ ಸಂವಿಧಾನವನ್ನು ರದ್ದು ಮಾಡಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರಕ್ಕೆ ದೇಶದ ಸಂವಿಧಾನವೇ ಸರ್ವಸ್ವ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರಾಜಸ್ಥಾನದ ಬಾರ್ಮರ್‍ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೂರನೇ ಬಾರಿಗೆ ಗೆದ್ದರೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. ದೇಶದಲ್ಲಿ ತುರ್ತುಪರಿಸ್ಥಿತಿ ಹೇರುವ ಮೂಲಕ ಸಂವಿಧಾನವನ್ನು ನಾಶಪಡಿಸಲು ಯತ್ನಿಸಿದ್ದು ಕಾಂಗ್ರೆಸ್, ಇದೀಗ ಸಂವಿಧಾನದ ಹೆಸರಿನಲ್ಲಿ ಮೋದಿಯನ್ನು ನಿಂದಿಸಲು ಪ್ರಯತ್ನ ಮಾಡುವ ಮೂಲಕ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಬಾಬಾ ಸಾಹೇಬರು ಬದುಕಿದ್ದಾಗ ಅವರನ್ನು ಚುನಾವಣೆಯಲ್ಲಿ ಸೋಲುವಂತೆ ಮಾಡಿದ ಕಾಂಗ್ರೆಸ್, ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲು ಕೂಡ ಬಿಡಲಿಲ್ಲ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನು ಅಂತ್ಯಗೊಳಿಸಲು ಯತ್ನಿಸಿದ ಕಾಂಗ್ರೆಸ್ ಇಂದು ಸಂವಿಧಾನದ ಹೆಸರಿನಲ್ಲಿ ಮೋದಿಯನ್ನು ನಿಂದಿಸಲು ಕೇವಲ ಸುಳ್ಳು ಹೇಳುತ್ತಿದೆ’ ಎಂದು ಪ್ರಧಾನಿ ಹೇಳಿದ್ದಾರೆ.

ದೇಶದಲ್ಲಿ ಪ್ರಪ್ರಥಮ ಬಾರಿಗೆ ಸಂವಿಧಾನ ದಿನಾಚರಣೆಗೆ ಚಾಲನೆ ನೀಡಿದವರು ಮೋದಿ, ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಯಾತ್ರಾಸ್ಥಳಗಳನ್ನು ನಾನು ಅಭಿವೃದ್ಧಿಪಡಿಸಿದ್ದೇನೆ. ಆದ್ದರಿಂದ ಕಾಂಗ್ರೆಸ್ ಮತ್ತು ಭಾರತ ಮೈತ್ರಿಕೂಟದ ಸುಳ್ಳುಗಳ ಬಗ್ಗೆ ಎಚ್ಚರದಿಂದಿರಬೇಕು. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಅವರು ಅವಮಾನಿಸಿದ್ದಾರೆ ಎಂದು ಅವರು ಹೇಳಿದರು.

ನರೇಂದ್ರ ಮೋದಿ ಮತ್ತು ಬಿಜೆಪಿಯ ಅಂತಿಮ ಗುರಿ ಬಾಬಾಸಾಹೇಬರ ಸಂವಿಧಾನವನ್ನು ನಾಶಪಡಿಸುವುದು ಎಂದು ರಾಹುಲ್ ಗಾಂಧಿ ಹೇಳಿದ ಕೆಲವೇ ವಾರಗಳಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ದೊಡ್ಡ ಪ್ರಮಾಣದ ವಾಗ್ದಾಳಿ ನಡೆಸಿದ್ದಾರೆ.