ಬಾರ್ಕೂರ್ ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಯಲ್ಲಿ ಕ್ಯಾಂಪಸ್ ಇಂಟರ್ವ್ಯೂ.

ಉಡುಪಿ: ಬಾರ್ಕೂರ್ ಹೆರಾಡಿ ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೇ ಹಾಗೂ ಜೂ ತಿಂಗಳಲ್ಲಿ ಕ್ಯಾಂಪಸ್ ಇಂಟರ್ವ್ಯೂ ನಡೆಯಲಿದ್ದು, ಕ್ಯಾಂಪಸ್ ಇಂಟರ್ವ್ಯೂನ ದಿನಾಂಕ, ಸಂಸ್ಥೆಯ ಹೆಸರು ಹಾಗೂ ಹುದ್ದೆಗಳು ಹೀಗಿವೆ.

ದಿನಾಂಕ:16-05-2024

  • ಶಿಪಾರ್ಕ್ ಮ್ಯಾರಿಟೈಮ್ ಫೌಂಡೇಶನ್ ಪಣಜಿ, ಗೋವಾ
  • ಹುದ್ದೆ: ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಮೆಕ್ಯಾನಿಕ್ ಮೋಟಾರು ವೆಹಿಕಲ್, ವೆಲ್ಡರ್

ದಿನಾಂಕ: 20-05-2024 & 21-05-2024

  • ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್. ಬಿಡದಿ, ರಾಮನಗರ
  • ಹುದ್ದೆ: ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಮೆಕ್ಯಾನಿಕ್ ಮೋಟಾರು ವೆಹಿಕಲ್, ವೆಲ್ಡರ್

ದಿನಾಂಕ: 03-06-2024

  • ಸುರಕ್ಷಾ ಕಾರ್ ಕೇರ್ ಬೆಂಗಳೂರು
  • ಹುದ್ದೆ: ಮೆಕ್ಯಾನಿಕ್ ಮೋಟಾರ್ ವೆಹಿಕಲ್

ದಿನಾಂಕ 05-06-2024

  • ಆರ್ಗ್ಯಾನಿಕ್ ಇಂಡಸ್ಟ್ರೀಸ್ ಪ್ರೈ. ಲಿಮಿಟೆಡ್ ನೆಲಮಂಗಲ
  • ಹುದ್ದೆ: ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್

ದಿನಾಂಕ: 07-06-2024

  • ಹಿಟಾಚಿ ಎನರ್ಜಿ ಪ್ರೈ. ಲಿಮಿಟೆಡ್ ಬೆಂಗಳೂರು
  • ಹುದ್ದೆ: ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ವೆಲ್ಡರ್

ದಿನಾಂಕ: 10-06-2024

  • ಮಂಗಳೂರು ಫೋರ್ಸ್ ಮತ್ತು ವೀಲ್ಸ್
  • ಹುದ್ದೆ: ಮೆಕ್ಯಾನಿಕ್ ಮೋಟಾರ್ ವೆಹಿಕಲ್, ಎಲೆಕ್ಟ್ರಿಷಿಯನ್

ದಿನಾಂಕ:15-06-2024

  • ಶ್ರೀ ಲಕ್ಷ್ಮಿ ಮೋಟಾರ್ಸ್ ಸರ್ವಿಸ್ ಪ್ರೈ. ಲಿಮಿಟೆಡ್ ಮತ್ತು ಸುಹಾಸ್ ಆಟೋಮೋಟಿವ್ ಪ್ರೈ. ಲಿಮಿಟೆಡ್
  • ಹುದ್ದೆ: ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್

ವಿದ್ಯಾರ್ಥಿಗಳಿಗೆ ಅತ್ಯುತ್ತಮ ತಾಂತ್ರಿಕ ಶಿಕ್ಷಣ ತರಬೇತಿ:
40 ವರ್ಷಗಳ ಹಿಂದೆ ಅಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೀರ್ತಿಶೇಷ ವಿ.ಎಲ್. ರೋಚ್‌ರವರ ದೂರದರ್ಶಿತ್ವದಿಂದ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಈ ಸಂಸ್ಥೆಯು ದಿನೇ ದಿನೇ ಬೆಳೆದು ಹೆಮ್ಮರವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡುವಲ್ಲಿ ಸಫಲತೆಯನ್ನು ಪಡೆದಿದೆ. ಕೇವಲ ಎರಡೇ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವನ್ನು ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವಲ್ಲಿ ನಮ್ಮ ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆ ಮಹತ್ತರ ಪಾತ್ರವನ್ನು ವಹಿಸಿದೆ.

ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯ ಐಟಿಐ ಕೋರ್ಸ್ಗಳ ದಾಖಲಾತಿ ಪ್ರಾರಂಭ:
2 ವರ್ಷ ಅವದಿಯ ಇಲೆಕ್ಟ್ರೀಷಿಯನ್, ಫಿಟ್ಟರ್ (ಜನರಲ್ ಮೆಕ್ಯಾನಿಕ್), ಮೆಕ್ಯಾನಿಕ್ ಮೋಟಾರ್ ವೆಹಿಕಲ್ (ಅಟೋಮೊಬೈಲ್), ಇಲೆಕ್ಟ್ರಾನಿಕ್ ಮ್ಯಾಕಾನಿಕ್ ಹಾಗೂ ಒಂದು ವರ್ಷ ಅವಧಿಯ ವೆಲ್ಡರ್ (ಫ್ಯಾಬ್ರಿಕೇಶನ್) ವಿಭಾಗಗಳಲ್ಲಿ ತರಬೇತಿಯನ್ನು ನೀಡುತ್ತಾ ಬಂದಿರುತ್ತದೆ. ಎಸ್.ಎಸ್.ಎಲ್.ಸಿ ಪಾಸ್, ಪಿಯುಸಿ ಪಾಸ್/ಫೇಲ್ ಆದ ವಿದ್ಯಾರ್ಥಿಗಳು/ ವಿದ್ಯಾರ್ಥಿನಿಯರು ನಮ್ಮ ಸಂಸ್ಥೆಗೆ ಸೇರಿ ಕೇವಲ 2 ವರ್ಷ ತಾಂತ್ರಿಕ ಶಿಕ್ಷಣವನ್ನು ಮುಗಿಸಿ ಸ್ವಾವಲಂಭಿಗಳಾಗಿ ಅಥವಾ ಉತ್ತಮ ಉದ್ಯೋಗ ಪಡೆದು ಜೀವನ ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಬಹುದಾಗಿದೆ.ಮಹಿಳಾ ಅಭ್ಯರ್ಥಿಗಳ ತರಬೇತಿಗೆ ವಿಶೇಷ ಅವಕಾಶಗಳಿವೆ. ಸಂಸ್ಥೆಗೆ ಸೇರಬಯಸುವ ವಿದ್ಯಾರ್ಥಿಗಳು ಕಛೇರಿಯಿಂದ ಅರ್ಜಿ ಫಾರಂಗಳನ್ನು ಪಡೆದು ಭರ್ತಿ ಮಾಡಿ ಸಲ್ಲಿಸಿ ಅವರಿಗೆ ಬೇಕಾದ ಕೋರ್ಸ್ಗಳನ್ನು ಆಯ್ಕೆ ಮಾಡಿ ಸೇರಬಹುದಾಗಿರುತ್ತದೆ.

ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗವನ್ನು ಕೊಡಿಸುವ ಬಗ್ಗೆ ಚಿಂತನೆ ನಡೆಸಿ ಪ್ರತಿ ವರ್ಷ ಹಲವು ಕಂಪನಿಗಳಿಂದ ಕ್ಯಾಂಪಸ್ ಇಂಟರ್ವ್ಯೂ ಮಾಡುತ್ತಾ ಬಂದಿರುತ್ತೇವೆ. ಅರ್ಹ ವಿದ್ಯಾರ್ಥಿಗಳು ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ನ್ಯಾಷನಲ್ ಕೈಗಾರಿಕಾ ತರಬೇತಿ ಸಂಸ್ಥೆ ಹೇರಾಡಿ ಬಾರ್ಕೂರು ಪ್ರಾಂಶುಪಾಲರು ಪ್ರಕಟಣೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448309075, 9481509052, 9448579101
pnitcbarkur@yahoo.co.in