ಬಂಟ್ವಾಳ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ.

ಬಂಟ್ವಾಳ: ತಾಲೂಕಿನ ಬೆಂಜನಪದವುನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ. 7 ರಂದು ಬುಧವಾರ ರಾತ್ರಿ ನಡೆದಿದೆ.

ಬೆಂಜನಪದವು ಕರಾವಳಿ ಸೈಟ್ ನಿವಾಸಿ ಉದಯ ಆಚಾರ್ಯ ಅವರ ಮಗ ಭವಿಷ್ಯ ಆಚಾರ್ಯ (15) ಆತ್ಮಹತ್ಯೆ ಮಾಡಿಕೊಂಡ ಬಾಲಕ.

ಬಡಕಬೈಲಿನ ಖಾಸಗಿ ಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯಾಗಿದ್ದ ಈತ ಕಲಿಕೆ ವಿಚಾರದಲ್ಲಿ ಆತ್ಮಹತ್ಯೆ ‌ಮಾಡಿಕೊಂಡಿರಬಹುದು ಎಂಬುದನ್ನು ಮನೆಯವರು ಶಂಕಿಸಿದ್ದಾರೆ.

ಅಗಸ್ಟ್ 7 ರಂದು ಬುಧವಾರ ರಾತ್ರಿ ಸುಮಾರು 7.30 ಗಂಟೆಗೆ ಸ್ನಾನ ಮಾಡಲೆಂದು ಬಚ್ಚಲು ಕೋಣೆಗೆ ತೆರಳಿದ ಮಗ 8 ಗಂಟೆಯಾದರೂ ವಾಪಸ್ ಬಾರದೇ ಇರುವುದನ್ನು ಕಂಡ ತಾಯಿ ಬಾಗಿಲು ಬಡಿದರೂ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಬಾಗಿಲು ಮುರಿದು ಒಳಗೆ ನುಗ್ಗಿದಾಗ ಈತ ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡಿರುವುದು ಗೊತ್ತಾಗಿದೆ.