ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನ.

ಉಡುಪಿ: ಬಂಟಕಲ್ಲಿನ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 11ನೇ ಪ್ರಾಜೆಕ್ಟ್ ಸ್ಪರ್ಧೆ ಮತ್ತು ಪ್ರದರ್ಶನ 10 ಮೇ 2024ರಂದು ಸಂಸ್ಥೆಯ ಆವರಣದಲ್ಲಿ ನಡೆಯಿತು. ಕಾಲೇಜಿನ ಪಠ್ಯೇತರ ಘಟಕ, ಐಎಸ್‍ಟಿಇ ಘಟಕವು ಸಂಸ್ಥೆಯ ಇನ್ಸ್ಟ್‍ಟ್ಯೂಟ್ ಇನ್ನೋವೇಶನ್ ಕೌನ್ಸಿಲ್‍ನ ಸಹಯೋಗದೊಂದಿಗೆ ಅಂತಿಮ ವರ್ಷದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನವು ಆಯಾ ವಿಭಾಗಗಳಲ್ಲಿ ನಡೆಯಿತು.

ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಾವು ಈ ನಾಲ್ಕು ವರ್ಷದಲ್ಲಿ ಅಭ್ಯಾಸ ಮಾಡಿದ ವಿಷಯಗಳನ್ನು ಅಂತಿಮ ವರ್ಷದಲ್ಲಿ ತಮ್ಮ ಯೋಚನೆ ಮತ್ತು ಯೋಜನೆಯನ್ನು ರೂಪಿಸಲು ಈ ಪ್ರಾಜೆಕ್ಟ್ ಸ್ಪರ್ಧೆಯು ಒಂದು ಅಡಿಪಾಯವಾಗಿದೆ. ಇದು ಭವಿಷ್ಯದಲ್ಲಿ ಹೊಸ ಹೊಸ ಆವಿಷ್ಕಾರಕಾರಗಳಿಗೆ ಕಾರಣವಾಗಬಲ್ಲದು. ಮೆಕ್ಯಾನಿಕಲ್ ವಿಭಾಗದಿಂದ 4 ಪ್ರಾಜೆಕ್ಟ್‍ಗಳು, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಿಂದ 16 ಪ್ರಾಜೆಕ್ಟ್, ಸಿವಿಲ್ ವಿಭಾಗದಿಂದ 4 ಪ್ರಾಜೆಕ್ಟ್‍ಗಳು ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಿಂದ 28 ಪ್ರಾಜೆಕ್ಟ್‍ಗಳನ್ನು ವಿಭಾಗಗಳಲ್ಲಿ ಪ್ರದರ್ಶಿಸಲಾಯಿತು. ಪ್ರಾಜೆಕ್ಟ್‍ಗಳ ಮಾದರಿಯನ್ನು ಕಿರಿಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಬಹಳ ಉತ್ಸಾಹದಿಂದ ಪ್ರದರ್ಶಿಸಿದರು.

ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ವಿಭಾಗದ ಮುಖ್ಯಸ್ಥರು, ಸಿಬದಬಂದಿಗಳು ಮತ್ತು ವಿದ್ಯಾರ್ಥಿಗಳು ಪ್ರಾಜೆಕ್ಟ್ ಪ್ರದರ್ಶನಕ್ಕೆ ಭೇಟಿ ನೀಡಿ ಪ್ರಾಜೆಕ್ಟ್ ಪ್ರದರ್ಶಿಸುತ್ತಿದ್ದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಉತ್ತಮ ಸಲಹೆ ನೀಡಿದರು. ಅಲ್ಲದೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪ್ರಾಜೆಕ್ಟ್ ಪ್ರದರ್ಶನಕ್ಕೆ ಭೇಟಿ ನೀಡಿದರು ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರತೀ ವಿಭಾಗದಲ್ಲಿ ಎರಡು ಉತ್ತಮ ಪ್ರಾಜೆಕ್ಟ್‍ಗಳಿಗೆ ಬಹುಮಾನ ನೀಡಲಾಗುತ್ತದೆ.