ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬ “ಸಾವಿಷ್ಕಾರ” ದಲ್ಲಿ ಬಹುಮಾನ.

ಮೂಡಲ್ ಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ದಿನಾಂಕ 1 ಮತ್ತು 2 ಮೇ 2024 ರಂದು ನಡೆದ ರಾಜ್ಯಮಟ್ಟದ ಸಾಂಸ್ಕೃತಿಕ ಹಬ್ಬ “ಸಾವಿಷ್ಕರ್”ದಲ್ಲಿ ಬಂಟಕಲ್‍ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಅಭಿಷೇಕ್ ಕಿಣಿ, ಪ್ರಖ್ಯಾತ್ ಪಿ ಶೆಟ್ಟಿ ಮತ್ತು ಶಶಾಂಕ್ ಇವರು ಎಲೆಕ್ಟ್ರಾನಿಕ್ ಕ್ವಿಜ್‍ನಲ್ಲಿ ಪ್ರಥಮ ಸ್ಥಾನ, ಅಭಿಷೇಕ್ ಕಿಣಿ ಮತ್ತು ಆಶಿಶ್ ಪ್ರಸಾದ್ ಇವರು Conceptify ನಲ್ಲಿ ದ್ವಿತೀಯ ಸ್ಥಾನ, ರಾಮಚಂದ್ರ ಉಡುಪ ಮತ್ತು ಪ್ರಥಮ್ ಎಲ್ ಕಾಮತ್ ಕೋಡ್ ಕ್ರೇಜ್‍ನಲ್ಲಿ ದ್ವಿತೀಯ ಸ್ಥಾನ ಹಾಗೂ ನಿಶಾಂತ್ ಜತ್ತನ್ ಲೋಗೋ ಡಿಸೈನ್‍ನಲ್ಲಿ ದ್ವಿತೀಯ ಸ್ಥಾನಗಳಿಸಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.