ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್: ವಾರ್ಷಿಕೋತ್ಸವ, ಬಹುಮಾನ ವಿತರಣೆ.

ಬ್ರಹ್ಮಾವರ : ಫಾರ್ಚ್ಯೂನ್ ಅಕಾಡೆಮಿಕ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಅಡತಕ್ಕೊಳಪಟ್ಟ ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಹಾಗೂ ಬಿ.ಡಿ ಶೆಟ್ಟಿ ಕಾಲೇಜ್ ಮಾಬುಕಳ ಇದರ ವಾರ್ಷಿಕೊತ್ಸವ ಜೂ, 2ರಂದು ನಿವೃತ್ತ ಪ್ರಾಂಶುಪಾಲ ಡಾ| ಬಿ. ಜಗದೀಶ್ ಶೆಟ್ಟಿ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿ ಗಳು ತಮ್ಮ ಜೀವನದಲ್ಲಿ ವಿವೇಕಾನಂದರ ಆದರ್ಶ ತತ್ತ್ವ ಹಾಗೂ ಮೌಲ್ಯ ಅಳವಡಿಸಿ ಕೊಂಡು ಸಮಾಜದಲ್ಲಿ ಪ್ರಾಮಾಣಿಕ ವ್ಯಕ್ತಿಯಾಗಿ ಬೆಳೆಯಬೇಕು ಎಂದರು.

ಫಾರ್ಚ್ಯೂನ್ ಅಕಾಡೆಮಿಕ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ| ದೈವಿಕ್ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಚೇರ್ ಮ್ಯಾನ್ ತಾರಾನಾಥ್ ಶೆಟ್ಟಿ ಅವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.ಚೇತನಾ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ ವಿದ್ಯಾರ್ಥಿ ನಾಯಕರಾದ ಕೋಟೇಶ್, ಎಂ.ವಿ. ಹರಿಕೃಷ್ಣ ಪ್ರಾಂಶುಪಾಲೆ ಸ್ಮಿತಾಮೋಲ್, ಉಪನ್ಯಾಸಕರಾದ ಅನುರಾಧಾ, ಅಂಬಿಕಾ, ಪ್ರೀತಿಕಾ ಇದ್ದರು.

ಉಪನ್ಯಾಸಕಿ ಅಮಿಷಾ ಸ್ವಾಗತಿಸಿ ವೀಣಾ ನಿರೂಪಿಸಿದರು. ಉಪನ್ಯಾಸಕ ಸುಕುಮಾರ್‌ ಶೆಟ್ಟಿಗಾರ್‌ ವಂದಿಸಿದರು.