ಪಡುಬಿದ್ರಿ: ಮಹಿಳೆ ನಾಪತ್ತೆ

ಪಡುಬಿದ್ರಿ: ಮಹಿಳೆ ಒಬ್ಬರು ನಾಪತ್ತೆಯಾಗಿರುವ ಘಟನೆ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಸೋಮವಾರ ಬೆಳಗ್ಗೆ ಕಾಪು ಮಾರಿಗುಡಿ ಬಳಿ ಸ್ಕೂಟರ್‌ ಇಟ್ಟು ಹೋಗಿರುವ ಎರ್ಮಾಳು ಗ್ರಾಮದ ನಿವಾಸಿ ವರ್ಷಾ (27) ನಾಪತ್ತೆಯಾಗಿರುವ ಬಗ್ಗೆ ಅವರ ಅಣ್ಣ ದೂರು ನೀಡಿದ್ದಾರೆ.

ವರ್ಷಾ ಅವರ ಪತಿ ಪಾದೂರು ಐಎಸ್‌ಪಿಆರ್‌ಎಲ್‌ನಲ್ಲಿ ಎಲೆಕ್ಟ್ರಿಷಿಯನ್‌ ಆಗಿದ್ದು, ಕೆಲಸಕ್ಕೆ ಹೋಗಿದ್ದರು. ಮನೆ ಬಿಟ್ಟು ತೆರಳುವ ವೇಳೆ ಅತ್ತೆ, ಮಾವ ಕೂಡ ಮನೆಯಲ್ಲಿ ಇರಲಿಲ್ಲ. ವರ್ಷಾ ಅವರು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ದಪ್ಪ ಶರೀರ ಹೊಂದಿರುವ ಅವರು ಕರಿಮಣಿ ಸರ ಧರಿಸಿದ್ದಾರೆ. ತುಳು, ಕನ್ನಡ ಭಾಷೆ ಮಾತಾನಾಡುತ್ತಾರೆ.
ಅವರ ಬಗ್ಗೆ ಯಾರಿಗಾದರೂ ತಿಳಿದುಬಂದಲ್ಲಿ ಪಡುಬಿದ್ರಿ ಪೊಲೀಸ್‌ ಠಾಣೆ(0820 2555452)ಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.