ದ್ವಿತೀಯ ಪಿಯುಸಿ ಪರೀಕ್ಷೆ – 44 ಗೈರು ಹಾಜರಿ

ಉಡುಪಿ: ಜಿಲ್ಲೆಯಲ್ಲಿ ಇಂದು ನಡೆದ ಪಿಯುಸಿ ಕನ್ನಡ ಪರೀಕ್ಷೆಯಲ್ಲಿ ಒಟ್ಟು9389 ಅಭ್ಯರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡು, 9345 ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 44 ಅಭ್ಯರ್ಥಿಗಳು ಗೈರು ಹಾಜರಾಗಿರುತ್ತಾರೆ. ಶೇ 99.5 ರಷ್ಟು ಹಾಜುರಾತಿ ಇರುತ್ತದೆ.

ವಿದ್ಯಾರ್ಥಿಗಳಲ್ಲಿ ಗಂಡು ವಿದ್ಯಾರ್ಥಿಗಳು 4361 ನೋಂದಣಿಗಾಗಿ, 4336 ಜನ ಹಾಜರಾಗಿದ್ದು, 25 ಜನ ಗೈರಾಗಿರುತ್ತರೆ. 5028 ಜನ ವಿದ್ಯಾರ್ಥಿನಿಯರು ನೊಂದಾಯಿಸಿಕೊಂಡು, 5009 ಪರೀಕ್ಷೆ ಬರೆದಿದ್ದು, 19 ಜನ ವಿದ್ಯಾರ್ಥಿನಿಯರು ಗೈರು ಹಾಜರಾಗಿರುತ್ತಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.