ತ್ರಿಶಾ ಕ್ಲಾಸಸ್ ಸಿಎ ಫೌಂಡೇಶನ್ ತರಗತಿ ಆರಂಭ

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಸಿಎ, ಸಿಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ಉತ್ತಮ ತರಬೇತಿಯನ್ನು ನೀಡುತ್ತಾ ಬಂದಿರುವ ತ್ರಿಶಾ ಸಂಸ್ಥೆಯು ಅಖಿಲ ಭಾರತ ಮಟ್ಟದಲ್ಲಿ ಸಿಎ ಫೌಂಡೇಶನ್, ಸಿಎ ಇಂಟರ್ಮೀಡಿಯೇಟ್, ಸಿಎ ಫೈನಲ್, ಸಿಎಸ್ಇಇಟಿ, ಸಿ ಎಸ್ ಎಕ್ಸಿಕ್ಯೂಟಿವ್ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಗಳಿಸಿಕೊಂಡಿದೆ.

ಜೂನ್ 19 ರಂದು ಉಡುಪಿ ಹಾಗೂ 20 ರಂದು ಮಂಗಳೂರಿನಲ್ಲಿ ಸಿಎ ಫೌಂಡೇಶನ್ ತರಗತಿಗಳು ಆರಂಭವಾಗುತ್ತಿದೆ.

ತರಗತಿಯ ವಿಶೇಷತೆಗಳು:

▪️ರಾಷ್ಟ್ರದ ಬೇರೆ ಬೇರೆ ಭಾಗದ ಪ್ರಸಿದ್ಧ ಮತ್ತು ಅನುಭವಿ ವಿಷಯ ತಜ್ಞರಿಂದ ತರಬೇತಿ.
▪️ವಿದ್ಯಾರ್ಥಿಗಳಿಗೆ ಸ್ಟಡಿ ಮೆಟೀರಿಯಲ್ ಗಳೊಂದಿಗೆ ರಿವಿಶನ್ ಪುಸ್ತಕ ಲಭ್ಯ.
▪️ಪರೀಕ್ಷಾ ಆಧಾರಿತ ರಿವಿಶನ್ ತರಗತಿಗಳು ಹಾಗೂ ಮಾಕ್ ಟೆಸ್ಟ್ ಸರಣಿ.
▪️ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಮೆಂಟರ್ ಶಿಪ್.
▪️ಹಾಸ್ಟೆಲ್ ವ್ಯವಸ್ಥೆ.

ಆಸಕ್ತರು ಉಡುಪಿಯ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಚೇರಿ ಅಥವಾ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜು ಮತ್ತು ಮಂಗಳೂರು ಅಳಕೆಯ ಶ್ರೀನಿಧಿ ಕಾಂಪ್ಲೆಕ್ಸ್ ನ ಎರಡನೇ ಮಹಡಿಯಲ್ಲಿರುವ ತ್ರಿಶಾ ಕ್ಲಾಸಸ್ ಗೆ ಭೇಟಿ ನೀಡಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.