ಡಿ.ಇ.ಎಲ್.ಇಡಿ ಕೋರ್ಸಿಗೆ ಅರ್ಜಿ ಆಹ್ವಾನ

ಉಡುಪಿ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಡಯಟ್, ಉಡುಪಿ ಇಲ್ಲಿ ಪ್ರಸಕ್ತ ಸಾಲಿನ ಪ್ರಥಮ ವರ್ಷದ ಡಿ.ಇ.ಎಲ್.ಇಡಿ ಕೋರ್ಸಿಗೆ ದಾಖಲಾತಿ ಪ್ರಕ್ರಿಯೆಯು 2024 ರ ಮೇ ತಿಂಗಳಲ್ಲಿ ನಡೆಸಿ, ಜೂನ್ 24 ರಂದು ತರಗತಿಯನ್ನು ಆರಂಭಿಸಲು ಯೋಜಿಸಲಾಗಿದ್ದು, ಸರಕಾರಿ ಕೋಟಾದಡಿ ಪ್ರವೇಶ ಬಯಸುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಡಿ.ಇ.ಎಲ್.ಇಡಿ ಕೋರ್ಸು ಎರಡು ವರ್ಷದ್ದಾಗಿದ್ದು, ಪಿ.ಯು.ಸಿ ಅಥವಾ ಡಿಗ್ರಿ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಕೋರ್ಸನ್ನು ಪೂರೈಸಿದವರು ಸರಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ಶಾಲಾ ಪಿ.ಎಸ್.ಟಿ ಅಥವಾ ಜಿ.ಪಿ.ಟಿ ಶಿಕ್ಷಕರಾಗಿ ನೇಮಕಗೊಳ್ಳಲು ಅರ್ಹತೆಯನ್ನು ಪಡೆಯುತ್ತಾರೆ.

ಈ ಸಂಸ್ಥೆಯು ಹೆಣ್ಣುಮಕ್ಕಳ ಶಿಕ್ಷಣ ಸಂಸ್ಥೆಯಾಗಿದ್ದು, ಸಾವಿರಾರು ಮಂದಿ ಶಿಕ್ಷಕರನ್ನು ತರಬೇತುಗೊಳಿಸಿದ ಖ್ಯಾತಿಯನ್ನು ಹೊಂದಿದೆ. ಈ ಶಿಕ್ಷಣ ಸಂಸ್ಥೆಯು ಅತ್ಯುತ್ತಮವಾದ ತರಗತಿ ಕೊಠಡಿಗಳು, ವಾಚನಾಲಯ, ಕಲಿಕಾ ಸಾಮಗ್ರಿಗಳು, ಭಾಷಾ, ವಿಜ್ಞಾನ, ಮನೋವಿಜ್ಞಾನ, ಕಂಪ್ಯೂಟರ್ ಮುಂತಾದ ಪ್ರಯೋಗಾಲಯಗಳು, ವಿಷಯ ಸಂಪನ್ಮೂಲ ಕೇಂದ್ರಗಳು, ಐಸಿಟಿ ಮತ್ತು ಡಿಜಿಟಲ್ ಸಾಧನ ಸಲಕರಣಗಳನ್ನು ಹೊಂದಿದೆ.

ಇಲ್ಲಿ ಹೆಣ್ಣು ಮಕ್ಕಳಿಗಾಗಿ ಸುಸಜ್ಜಿತವಾದ ಹಾಸ್ಟೆಲ್ ವ್ಯವಸ್ಥೆಯಿದ್ದು, ಇದು ಸಂಪೂರ್ಣ ಉಚಿತವಾಗಿದೆ. ಬೇರೆ ಕಡೆಯಿಂದ ಬಂದು ವಾಸ್ತವ್ಯವಿದ್ದು, ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.

ಡಿ.ಇ.ಎಲ್.ಇಡಿ ಕೋರ್ಸು ಅಭ್ಯಾಸ ಮಾಡಲು ಆಸಕ್ತರಿರುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಉಡುಪಿ ಶೋಕ ಮಾತಾ ಚರ್ಚ್ ಹತ್ತಿರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಡಯಟ್ ಅಥವಾ ವಿಭಾಗ ಮುಖ್ಯಸ್ಥರು ಮೊ.ನಂ: 9481211471 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಡಯಟ್‌ನ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.