ಜೆ.ಇ.ಇ ಮೈನ್-ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಮೊದಲ ಹಂತದ ಪರೀಕ್ಷೆಯಲ್ಲಿ ಜ್ಞಾನಸುಧಾದ 8 ಮಂದಿಗೆ 99ಕ್ಕೂ ಅಧಿಕ ಪರ್ಸಂಟೈಲ್, 3 ಮಂದಿಗೆ 99.9ಕ್ಕಿಂತ ಅಧಿಕ ಪರ್ಸಂಟೈಲ್, ಗಣಿತಶಾಸ್ತ್ರದಲ್ಲಿ ಪ್ರಿಯಾಂಶ್ ಗೆ 100 ಪರ್ಸಂಟೈಲ್.

ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಎನ್.ಟಿ.ಎ ನಡೆಸುವ ಜೆ.ಇ.ಇ.ಮೈನ್ – ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ – 2024 ಪ್ರಥಮ ಹಂತದ ಪರೀಕ್ಷೆಯ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 8 ಮಂದಿ ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ.

ವಿದ್ಯಾರ್ಥಿಗಳಾದ ಕೇದಾರ್ ರಮೇಶ್ ಕುಲಕರ್ಣಿ 99.9670351 ಪರ್ಸಂಟೈಲ್, ಬಿಪಿನ್ ಜೈನ್.ಬಿ.ಎಂ. 99.9495831 ಪರ್ಸಂಟೈಲ್, ಪ್ರಣವ್ ಕುಮಾರ್ ಭಂಡಿ 99.9069226 ಪರ್ಸಂಟೈಲ್, ಚೈತನ್ಯ ಚಲಿತ್ 99.7905759 ಪರ್ಸಂಟೈಲ್, ಚಿರಂತನ ಜೆ.ಎ. 99.7498546 ಪರ್ಸಂಟೈಲ್, ಪ್ರಿಯಾಂಶ್ ಎಸ್.ಯು. 99.705255 ಪರ್ಸಂಟೈಲ್ (ಗಣಿತ ಶಾಸ್ತ್ರ 100 ಪರ್ಸಂಟೈಲ್), ಸುಜಲ್ ಸಚಿನ್ ಯಾಡವಿ 99.6548381 ಪರ್ಸಂಟೈಲ್ ಹಾಗೂ ಕನ್ನಿಕಾ ದೀಪಕ್ ಶೆಟ್ಟಿ 99.3699886 ಪರ್ಸಂಟೈಲ್ ಗಳಿಸಿದ್ದಾರೆ.

ಈಗಾಗಲೇ ಪ್ರಕಟಗೊಂಡ ಜೆ.ಇ.ಇ. ಮೈನ್ ಬಿ.ಟೆಕ್ -2024 ಫಲಿತಾಂಶದಲ್ಲೂ ಜ್ಞಾನಸುಧಾದದ 7 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನು ಹಾಗೂ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಬಳಗವನ್ನು ಅಜೆಕಾರ್ ಪದ್ಮಗೊಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಆಡಳಿತ ಮಂಡಳಿ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.