ಜೂ.7, 8ರಂದು ವಿದ್ಯಾಗಿರಿ ಕ್ಯಾಂಪಸ್’ನಲ್ಲಿ ಆಳ್ವಾಸ್ ಪ್ರಗತಿ-2024 ಉದ್ಯೋಗ ಮೇಳ

137ಕ್ಕೂ ಹೆಚ್ಚು ಕಂಪನಿಗಳು ಭಾಗಿ, 20 ಸಾವಿರ
ಅಭ್ಯರ್ಥಿಗಳ ನಿರೀಕ್ಷೆ.

ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದರೆ14ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳವನ್ನು ಜೂ.7, 8ರಂದು ವಿದ್ಯಾಗಿರಿ ಕ್ಯಾಂಪಸ್ ನಲ್ಲಿ ಹಮ್ಮಿಕೊಂಡಿದ್ದು, 20 ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಆಳ್ವ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿಯ ಉದ್ಯೋಗ ಮೇಳದಲ್ಲಿ 137ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿದ್ದು 68 ಕಂಪನಿಗಳು ನೊಂದಾಯಿಸಿಕೊಂಡಿವೆ ಎಂದರು.

ಆಳ್ವಾಸ್ ಪ್ರತಿಷ್ಠಾನವು ಈವರೆಗೆ ಸುಮಾರು 5ಕೋಟಿ ರೂ. ಗಳನ್ನು ವ್ಯಯಿಸಿದ್ದು, ವಿವಿಧ ಕಂಪೆನಿಗಳು ಇಲ್ಲಿಯವರೆಗೆ ಒಟ್ಟು 31,896 ಉದ್ಯೋಗಗಳನ್ನು ನೀಡಿವೆ. ಇತರ ಸಂಸ್ಥೆಗಳ ಜತೆ ಸೇರಿ 6 ಹಾಗೂ ಆಳ್ವಾಸ್ ಸಂಸ್ಥೆಯಿಂದ 13 ಉದ್ಯೋಗ ಮೇಳ ನಡೆಸಲಾಗಿದೆ ಎಂದರು.

ವಿವಿಧ ಕಂಪನಿಗಳಿಂದ ಉದ್ಯೋಗ:
ಎಂಬಿಎ, ಎಂ.ಕಾಂ, ಬಿ.ಕಾಂ, ಬಿಬಿಎ, ಬಿಎಸ್ಸಿ, ಬಿಎ, ಬಿಸಿಎ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಹೈದರಾಬಾದ್ ನ ಫ್ಯಾಕ್ಟ್ ಸೆಟ್ ಸಂಸ್ಥೆ, ಇಎಕ್ ಎಲ್ ಸರ್ವಿಸ್, ಮಹಿಂದ್ರ ಫೈನಾನ್ಸ್, ಎಚ್ ಡಿ ಎಫ್ ಸಿ, ಆ್ಯಕ್ಸಿಸ್, ಐಡಿಎಫ್ ಸಿ ಫಸ್ಟ್ ಬ್ಯಾಂಕ್, ಬಂಧನ್ ಬ್ಯಾಂಕ್, ಉತ್ಪಾದನಾ ವಲಯದಲ್ಲಿ ಕಿಲೋ೯ಸ್ಕರ್ ಟೊಯೋಟಾ ಟೆಕ್ಸ್ ಟೈಲ್ಸ್ ಮೆಷಿನರಿ, ಉಷಾ ಆರ್ಮರ್ ಮುಂತಾದ ಕಂಪನಿಗಳು ಭಾಗವಹಿಸಲಿದೆ.

ಐಟಿ ವಲಯದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ದಿಯಾ ಸಿಸ್ಟಮ್ಸ್ 24 € 7 ಎಐ, ಕಾನ್ಸೆಂಟ್ರಿಕ್ಸ್, ವಿನ್ ಮ್ಯಾನ್ ಸಾಫ್ಟ್ ವೇರ್ ಕಂಪನಿಗಳು ಯಾವುದೇ ಹಿನ್ನೆಲೆಯ ಪದವೀಧರರನ್ನು ನೇಮಿಸಿಕೊಳ್ಳಲಿವೆ.
ಮಾರಾಟ ವಲಯದಲ್ಲಿ ಕಲ್ಟ್ ಫಿಟ್, ಐಟಿಸಿ ಲಿಮಿಟೆಡ್, ಬ್ಲೂ ಸ್ಟೋನ್ ಜ್ಯುವೆಲರಿಗಳು ಉದ್ಯೋಗ ನೀಡಲಿದೆ.

ಅಜಾಜಕ್ಸ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್, ಬುಹ್ಲರ್ ಇಂಡಿಯಾ, ನೆಕ್ಸ್ಟೀರ್ ಆಟೋಮೋಟಿವ್ ಇಂಡಿಯಾ, ವಂಡರ್ ಲಾ ಹಾಲಿಡೇಸ್ ನಂತಹ ಕಂಪೆನಿಗಳು ಮೆಕ್ಯಾನಿಕಲ್ ಎಂಜಿನಿಯರ್ ಗಳಿಗೆ 50ಕ್ಕೂ ಹೆಚ್ಚಿನ ಉದ್ಯೋಗಾವಕಾಶ ನೀಡಲಿದೆ.ವೋಲ್ವೋ ಗ್ರೂಪ್ ಇಂಡಿಯಾ ಮಹಿಳಾ ಮೆಕ್ಯಾನಿಕಲ್ ಪದವೀಧರರಿಗೆ ಉದ್ಯೋಗ ನೀಡಲಿದೆ.

ಆ್ಯಂಥಮ್ ಬಯೋ, ಹೈದರಾಬಾದ್ ನ ಎಂ ಎಸ್ ಎನ್ ಲ್ಯಾಬೋರೇಟರೀಸ್ ಹಾಗೂ ಹಿಟಿರೋ ಲ್ಯಾಬ್ಸ್ ಎಂ ಎಸ್ಸಿ ಹಾಗೂ ಬಿಎಸ್ಸಿ ಪದವೀಧರರಿಗೆ ಉದ್ಯೋಗ ಕಲ್ಪಿಸಲಿವೆ.

ಸನ್ಸೆರಾ ಎಂಜಿನಿಯರಿಂಗ್, ಏರೋಸ್ಪೇಸ್ ಡಿವಿಷನ್, ಸೆರಾಟಿಜಿಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಿರ್ಲೋಸ್ಕರ್ ಟೊಯೋಟಾ ಟೆಕ್ಸ್ ಟೈಲ್ಸ್ ಮೆಷಿನರಿ, ಸುಂದರಂ ಆಟೋ ಕಾಂಪೋನೆಂಟ್ಸ್ ಲಿಮಿಟೆಡ್, ಹಿಮಾಲಯ ವೆಲ್ನೆಸ್, ಮಾಂಡೋವಿ ಮೋಟಾರ್ಸ್, ಪ್ರಥಮ್ ಮೋಟರ್ಸ್, ಅರವಿಂದ್ ಮೋಟಾರ್ಸ್, ಸುಪ್ರೀಂ ಆಟೋ ಮತ್ತು ಇನ್ನು ಅನೇಕ ಕಂಪೆನಿಗಳು ಐಟಿಐ ಹಾಗೂ ಡಿಪ್ಲೋಮೋ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಿವೆ.

ನರ್ಸಿಂಗ್ ಪದವೀಧರ ಅಭ್ಯರ್ಥಿಗಳಿಗೆ ಪ್ರಮುಖ ಆಸ್ಪತ್ರೆಗಳಾದ ಹಿರಾನಂದಿನಿ ಆಸ್ಪತ್ರೆ, ಮುಂಬೈಯ ಅಪೋಲೋ ಆಸ್ಪತ್ರೆ, ಕೆಎಂಸಿ ಆಸ್ಪತ್ರೆ ಹಾಗೂ ಇನ್ನಿತರ ವೈದ್ಯಕೀಯ ಸಂಸ್ಥೆಗಳು ಉದ್ಯೋಗ ನೀಡಲಿವೆ.

ಆಳ್ವಾಸ್’ಗೆ ಹೊರ ಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಜೂನ್ 6 ರಿಂದ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.

ಉಚಿತ ನೋಂದಾವಣಿ:
ಐಟಿಐ ಅಭ್ಯರ್ಥಿಗಳಿಗೆ ಬಸ್ ಸೌಕರ್ಯ ಕಲ್ಪಿಸಲಾಗುವುದು. ಅಭ್ಯರ್ಥಿಗಳ ಕಡ್ಡಾಯ ಉಚಿತ ನೋಂದಾವಣಿ ಹಾಗೂ ಉದ್ಯೋಗ ನೀಡಲಿರುವ ಕಂಪನಿಗಳ ಮಾಹಿತಿಗೆ: www.alvaspragati.com.
ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೋ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.