ಕೋಟ: ಹಣಕಾಸಿನ ವಿಚಾರಕ್ಕೆ ಹಲ್ಲೆ; ಪ್ರಕರಣ ದಾಖಲು

ಕೋಟ: ಹಣಕಾಸಿನ ವಿಚಾರಕ್ಕೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಹಲ್ಲೆ ಪ್ರಕರಣ ನಡೆದಿದೆ.

ಕುಂಭಾಶಿಯ ಪುರಂದರ (44) ಎನ್ನುವ ವ್ಯಕ್ತಿ ತಮ್ಮ ಮನೆಯಲ್ಲಿದ್ದ ಸಮಯದಲ್ಲಿ ಆರೋಪಿ ಸಾಗರ್ ಎನ್ನುವ ವ್ಯಕ್ತಿ ಬೆಳಿಗ್ಗೆ ದೂರುದಾರರ ಮನೆಗೆ ಬಂದು ಅವರನ್ನು ಅಡ್ಡಗಟ್ಟಿ ಬಡ್ಡಿ ಕಾಸಿನ ಹಣದ ವಿಚಾರದಲ್ಲಿ ಜಗಳ ಮಾಡಿದ್ದಾರೆ. ಅಲ್ಲಿಂದ ತೆಕ್ಕಟ್ಟೆಯಲ್ಲಿರುವ ಆರೋಪಿಯ ಮನೆಗೆ ಕರೆದುಕೊಂಡು ಹೋಗಿದ್ದು, ಆರೋಪಿಯ ಮನೆಯ ಅಂಗಳಲ್ಲಿ ಬಾರುಗೋಲಿನಲ್ಲಿ ದೂರುದಾರರಿಗೆ ಹೊಡೆದು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ.

ಈ ಬಗ್ಗೆ ಪುರಂದರ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 83/2024 ಕಲಂ: 341, 324, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.