ಕೋಟ:ಶಮಂತ ಕುಮಾರಗೆ ಪಿಎಚ್ ಡಿ ಪದವಿ

ಕೋಟ: ಹವ್ಯಾಸಿ ಯಕ್ಷಗಾನ ಕಲಾವಿದ, ರಂಗನಟ, ರಂಗ ನಿರ್ದೇಶಕ, ಹಾವೇರಿ ಗುದ್ಲೆಪ್ಪಹಳ್ಳಿಕೇರಿ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೋಟ ಶಮಂತ ಕುಮಾರ ಕೆ.ಎಸ್., ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಸಲ್ಲಿಸಿದ ಕನ್ನಡದಲ್ಲಿ ಠಾಕೂರ ನಾಟಕಗಳು ಬಿಡುಗಡೆಯ ಕಥನಗಳು ಸಂಶೋಧನ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿದೆ.

ಉಡುಪಿ ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿರುವ ಇವರು ಮಂಗಳೂರು ವಿ.ವಿ.ಯಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದು, ಎನ್.ಇ.ಟಿ., ಕೆ.ಎಸ್.ಇಟಿ. ಪರೀಕ್ಷೆಗಳಲ್ಲೂ ಉತ್ತೀರ್ಣರಾಗಿದ್ದಾರೆ. ಇವರು ಕೋಟತಟ್ಟು ಗ್ರಾಮದ ಶ್ರೀಧರ ಗಾಣಿಗ ಮತ್ತು ಬಾಗಿರಥಿ ದಂಪತಿಯ ಪುತ್ರ.