ಕೊಲ್ಲೂರು: ಯುವತಿಯೊಡನೆ ಸಂಪರ್ಕ ಬೆಳೆಸಿ ಅತ್ಯಾಚಾರ – ದೂರು ದಾಖಲು.

ಕೊಲ್ಲೂರು: ಜಿಲ್ಲೆಯ ಕೊಲ್ಲೂರು ಸಮೀಪ ಚಿತ್ತೂರು ನಿವಾಸಿ ಯುವತಿಯೊಡನೆ ಸಂಪರ್ಕ ಬೆಳೆಸಿ ಆಕೆಯನ್ನು ಅತ್ಯಾಚಾರ ಎಸಗಿದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಆರೋಪಿ ಕೊಪ್ಪಳ ಮೂಲದ ಮಂಜುನಾಥ್‌ನನ್ನು ಬಂಧಿಸಿದ ಕೊಲ್ಲೂರು ಪೊಲೀಸ್‌ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಆತನಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಯ ಫೋಟೋ ಬಳಸಿ ಬೆದರಿಕೆ ಒಡ್ಡಿದ ಬಗ್ಗೆ ಕೂಡ ದೂರಿನಲ್ಲಿ ಆಕೆ ವಿವರಿಸಿದ್ದಾರೆ.