ಕೊಲ್ಲೂರು: ಕೆಲಸಕ್ಕೆ ಹೋದ ಯುವಕ ನಾಪತ್ತೆ

ಕೊಲ್ಲೂರು: ಬೆಳ್ಳಾಲ ಗ್ರಾಮದ ಮೋರ್ಟು ನಿವಾಸಿಯಾದ ನರಸಿಂಹ ಅವರ ಪುತ್ರ ಸುದರ್ಶನ್ (18) ಫೆ. 28 ರಂದು ನಾಪತ್ತೆಯಾಗಿದ್ದಾರೆ.

ಅಂದು ಬೆಳಿಗ್ಗೆ ಇಲೆಕ್ಟ್ರಿಶಿಯನ್ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರ ಹೋದವರು ಸಂಜೆಯಾದರೂ ತಿರುಗಿ ಮನೆಗೆ ಬರದ್ದನ್ನು ಕಂಡು ಅಕ್ಕ ಪಕ್ಕದ ಹಾಗೂ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ.

ಯುವಕನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು ಹತ್ತಿರದ ಕೊಲ್ಲೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.