ಕೆ.ಸಿ.ಇ.ಟಿ ಫಲಿತಾಂಶ: ಜ್ಞಾನಸುಧಾಕ್ಕೆ ಇಂಜಿನಿಯರಿಂಗ್‍ನಲ್ಲಿ ಸಾವಿರದೊಳಗಿನ 18 ರ್ಯಾಂಕ್.

ಕಾರ್ಕಳ: ಇಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸ್‍ಗಳಿಗೆ ನಡೆದ ಕೆ.ಸಿ.ಇ.ಟಿ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಕಾಲೇಜು ಇಂಜಿನಿಯರಿಂಗ್ ವಿಭಾಗದಲ್ಲಿ ಸಾವಿರದೊಳಗಿನ 18 ರ್ಯಾಂಕ್, 2ಸಾವಿರದೊಳಗೆ 51 ರ್ಯಾಂಕ್, 3 ಸಾವಿರದೊಳಗೆ 76 ರ್ಯಾಂಕ್, 4 ಸಾವಿರದೊಳಗೆ 112 ರ್ಯಾಂಕ್, 5 ಸಾವಿರದೊಳಗೆ 136 ರ್ಯಾಂಕ್‍ಗಳು ಸಂಪಾದಿಸಿರುತ್ತದೆ.

ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಿಯಾಂಶ್ ಎಸ್.ಯು 148ನೇ ರ್ಯಾಂಕ್, ಚಿರಂತನ ಜೆ..ಎ 179ನೇ ರ್ಯಾಂಕ್ (ಅಗ್ರಿ ಬಿ.ಎಸ್ಸಿ 34ನೇ ರ್ಯಾಂಕ್), ರಿಷಿತ್‍ವೇನು ಬಿಳಿಮಗ್ಗ 197ನೇ ರ್ಯಾಂಕ್, ಬಿಪಿನ್ ಜೈನ್ ಬಿ.ಎಂ 235ನೇ ರ್ಯಾಂಕ್, ಕ್ಷಿರಾಜ್ ಎಸ್ ಆಚಾರ್ಯ 301ನೇ ರ್ಯಾಂಕ್ (ಅಗ್ರಿ.ಬಿ.ಎಸ್ಸಿ 36ನೇ ರ್ಯಾಂಕ್, ವೆಟರ್ನರಿ 98ನೇ ರ್ಯಾಂಕ್, ಬಿ.ಎಸ್ಸಿ.ನರ್ಸಿಂಗ್ 98ನೇ ರ್ಯಾಂಕ್, ಬಿ.ಎನ್.ವೈ.ಎಸ್. 115ನೇ ರ್ಯಾಂಕ್), ಅನುರಾಗ್ 307ನೇ ರ್ಯಾಂಕ್, ನಿಮೇಶ್ ಆರ್ ಆಚಾರ್ಯ 391ನೇ ರ್ಯಾಂಕ್, ಕ್ರಿಷ್ ಎಸ್. ಕಡಲಿಗಿಕರ್ 570ನೇ ರ್ಯಾಂಕ್ (ಅಗ್ರಿ.ಬಿ.ಎಸ್ಸಿ 65ನೇ ರ್ಯಾಂಕ್, ಬಿ.ಎನ್.ವೈ.ಎಸ್. 188ನೇ ರ್ಯಾಂಕ್), ತೇಜಸ್ ಎಸ್.ಜನಗೆಕರ್ 605ನೇ ರ್ಯಾಂಕ್ (ಅಗ್ರಿ.ಬಿ.ಎಸ್ಸಿ 73ನೇ ರ್ಯಾಂಕ್, ವೆಟರ್ನರಿ 106ನೇ ರ್ಯಾಂಕ್, ಬಿ.ಎನ್.ವೈ.ಎಸ್. 80ನೇ ರ್ಯಾಂಕ್), ಸಮರ್ಥ್ ಎಸ್.ನಾಯಕ್ 648ನೇ ರ್ಯಾಂಕ್, .ಪ್ರತೀಕ್ ಆಶೋಕ್ ಆಚಾರ್ಯ 668ನೇ ರ್ಯಾಂಕ್, ಚೈತನ್ಯ ಚಲಿತ್ 716ನೇ ರ್ಯಾಂಕ್, ಕೇದಾರ್ ಆರ್. ಕುಲಕರ್ಣಿ 755ನೇ ರ್ಯಾಂಕ್, ಕ್ಷಮಾ ಜಯಚಂದ್ 925ನೇ ರ್ಯಾಂಕ್, ಸೃಜನ್ ಎಂ.ಪಿ 943ನೇ ರ್ಯಾಂಕ್, ನೇಸರ್ ಸಿ.ಪಿ. 957ನೇ ರ್ಯಾಂಕ್, ತ್ರಿಷಾ ಬಾಲಚಂದ್ರ 962ನೇ ರ್ಯಾಂಕ್ (ಅಗ್ರಿ.ಬಿ.ಎಸ್ಸಿ 186ನೇ ರ್ಯಾಂಕ್) ಹಾಗೂ ಅದಿತ್. ಎನ್. ಪೂಜಾರಿ 989ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ಇಂಜಿನಿಯಂರಿಂಗ್‍ನಲ್ಲಿ 18 ವಿದ್ಯಾರ್ಥಿಗಳು, ಅಗ್ರಿ ಬಿ.ಎಸ್ಸಿಯಲ್ಲಿ 41 ವಿದ್ಯಾರ್ಥಿಗಳು, ವೆಟರರ್ನರಿಯಲ್ಲಿ 23 ವಿದ್ಯಾರ್ಥಿಗಳು, ಬಿ.ಎನ್.ವೈ.ಸಿಯಲ್ಲಿ 29 ವಿದ್ಯಾರ್ಥಿಗಳು ಸೇರಿ ಒಟ್ಟು ಸಾವಿರದೊಳಗಿನ 127 ರ್ಯಾಂಕ್‍ಗಳು ಜ್ಞಾನಸುಧಾಕ್ಕೆ ಲಭಿಸಿರುತ್ತದೆ. ಈ ವರ್ಷ ರಾಜ್ಯದಲ್ಲಿ 3,10,314 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಸಂಸ್ಥೆಯ ಕೆ.ಸಿ.ಇ.ಟಿ ಸಾಧಕ ವಿದ್ಯಾರ್ಥಿಗಳನ್ನು, ತರಬೇತಿ ನೀಡಿದ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.