ಆರ್ ಎಸ್ ಸೆಕೆಂಡ್ ಹ್ಯಾಂಡ್ ಕಾರ್ ಮಾರಾಟ ನವೀಕೃತ ಶೋರೂಮ್ ಉದ್ಘಾಟನೆ

ಉಡುಪಿ : ಆರ್ ಎಸ್ ಸೆಕೆಂಡ್ ಹ್ಯಾಂಡ್ ಕಾರ್ ಮಾರಾಟ ಶೋರೂಮ್ ಹಿರಿಯಡ್ಕದ ಒಂತಿಬೆಟ್ಟುನಲ್ಲಿ ಪ್ರಾರಂಬಾವಾಗಿದ್ದು, ಇದರ ಉದ್ಘಾಟನಾ ಸಮಾರಂಭಕ್ಕೆ ಜಯಶ್ರೀ ಚಂದ್ರಶೇಖರ್ ನಾಯರ್ , ಚಂದ್ರಶೇಖರ್ ನಾಯರ್ , ಹಿರಿಯಡ್ಕ ಪೊಲೀಸ್ ಸ್ಟೇಷನ್ನ ಠಾಣಾಧಿಕಾರಿ ಮಂಜುನಾಥ್ , ಪಂಚಾಯತ್ ಅಧ್ಯಕ್ಷರಾದ ಸಂದೀಪ್ , ಉಡುಪಿ ಕಾರ್ಸ್ ನ ಮೊಹಮದ್ ಅಶ್ರಫ್ , ಮೊಹಮದ್ ರಫೀಕ್ ಪುತ್ತಿಗೆ ಹಾಗು ಪ್ರಿ ಓನ್ಡ್ ಡೀಲರ್ಸ್ ಅಸೋಸಿಯೆಶನ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉತ್ತಮ ಗುಣ ಮಟ್ಟದ ಎಲ್ಲ ತರಹದ ವಿನ್ಯಾಸಮಯ ಹಾಗು […]

ಮಣಿಪಾಲ: ಖ್ಯಾತ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸಕ ಡಾ.ಪ್ರತಾಪ್ ಕುಮಾರ್ ಅವರು ಸಮಾಲೋಚನೆಗಾಗಿ ಲಭ್ಯ.

ಮಣಿಪಾಲ, ಜೂ.3 ಖ್ಯಾತ ಸಂತಾನೋತ್ಪತ್ತಿ ಔಷಧಿ ತಜ್ಞ ಮತ್ತು ಶಸ್ತ್ರಚಿಕಿತ್ಸಕ ಡಾ. ಪ್ರತಾಪ್ ಕುಮಾರ್ ಎನ್, ಈಗ ಪೂರ್ಣ ಸಮಯಕ್ಕೆ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ, ಡಾ ರಾಮದಾಸ್ ಪೈ ಬ್ಲಾಕ್‌ನಲ್ಲಿ ಸಮಾಲೋಚನೆಗಾಗಿ ಲಭ್ಯವಿರುತ್ತಾರೆ. 3ನೇ ಜೂನ್ 2024 ರಿಂದ ಜಾರಿಗೆ ಬರುವಂತೆ ಅವರು ಡಾ. ರಾಮದಾಸ್ ಪೈ ಬ್ಲಾಕ್‌ನಲ್ಲಿ ಪೂರ್ವ ನಿಗದಿ (ಅಪ್ಪೋಯಿಂಟ್ಮೆಂಟ್) ಮೂಲಕ ತಮ್ಮ ಪರಿಣಿತ ಸೇವೆಗಳನ್ನು ನೀಡಲಿದ್ದಾರೆ. ತಮ್ಮ ಅಸಾಧಾರಣ ಪರಿಣತಿ ಮತ್ತು ಸಹಾನುಭೂತಿಯ ಆರೈಕೆಗಾಗಿ ಗುರುತಿಸಲ್ಪಟ್ಟಿರುವ ಡಾ. ಪ್ರತಾಪ್ ಕುಮಾರ್ ಅವರು ಟೆಸ್ಟ್ […]

ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ: ಎಲ್ಲೋ ಅಲರ್ಟ್ ಘೋಷಣೆ.

ಉಡುಪಿ, ಜೂನ್ 03: ಭಾರತೀಯ ಹವಾಮಾನ ಇಲಾಖೆ / ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆಯೆಂದು ಸೂಚಿಸಿರುತ್ತಾರೆ. ಆದ್ದರಿಂದ ಜಿಲ್ಲೆಯಲ್ಲಿ ಜೂನ್ 3 ರಿಂದ ಜೂನ್ 8 ರವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ದಿನಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು ಈ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಹಿಸಬೇಕಾಗಿರುವುದರಿಂದ ಸಾರ್ವಜನಿಕರಿಗೆ ಈ ಕೆಳಕಂಡಂತೆ ಸೂಚನೆಗಳನ್ನು […]

ಉಡುಪಿ: ಪುತ್ತೂರು ಯಕ್ಷಗಾನ ತರಬೇತಿಗೆ ಚಾಲನೆ

ಉಡುಪಿ: ಉಡುಪಿ ಪುತ್ತೂರು ಶ್ರೀ ಭಗವತೀ ಯಕ್ಷಕಲಾ ಬಳಗದ ವತಿಯಿಂದ ತೆಂಕುತಿಟ್ಟು ಯಕ್ಷಗಾನ ಹೆಜ್ಜೆಗಾರಿಕೆ ತರಬೇತಿಯ ನೂತನ ತರಗತಿಯು ಭಾನುವಾರ ಪುತ್ತೂರು ಶ್ರೀ ಭಗವತೀ ದುರ್ಗಾಪರಮೇಶ್ವರೀ ದೇವಳದ ಶ್ರೀ ಭಗವತೀ ಸಭಾಗ್ರಹದಲ್ಲಿ ಪ್ರಾರಂಭಗೊಂಡಿತು. ಖ್ಯಾತ ಯಕ್ಷಗಾನ ಕಲಾವಿದ ವಾಸುದೇವರಂಗಾ ಭಟ್ ತರಬೇತಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು. ಶ್ರೀ ಭಗವತೀ ಯಕ್ಷಕಲಾ ಬಳಗದ ಅಧ್ಯಕ್ಷ ಪ್ರಮೋದ್ ತಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಯಕ್ಷಗಾನ ಕಲಾವಿದ ಹಾಗು ಯಕ್ಷಗುರು ರಕ್ಷಿತ್ ಪಡ್ರೆ, ದೇವಳದ ಆಡಳಿತ ಮೊಕ್ತೇಸರ […]

ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಆದ ಗೌತಮ್ ಅದಾನಿ.

ನವದೆಹಲಿ: ಗೌತಮ್ ಅದಾನಿ ಮತ್ತೆ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿರುವ ನಂಬರ್ 1 ಭಾರತೀಯ ಅನ್ನೋ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿರುವ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ.ಬ್ಲೂಮ್‌ಬರ್ಗ್ ಬಿಡುಗಡೆ ಮಾಡಿರುವ ಏಷ್ಯಾದ ಶ್ರೀಮಂತರ ವರದಿಯಲ್ಲಿ ಗೌತಮ್ ಅದಾನಿ ಮೊದಲ ಸ್ಥಾನಕ್ಕೇರಿದ್ದರೆ, ಮುಕೇಶ್ ಅಂಬಾನಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅದಾನಿ ನೆಟ್‌ ವರ್ತ್ ಒಟ್ಟು 111 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತವಾಗಿದ್ದರೆ, ಅಂಬಾನಿ ಒಟ್ಟು ಆಸ್ತಿ 109 ಬಿಲಿಯನ್ ಅಮೆರಿಕನ್ ಡಾಲರ್ […]