ಕುಂದಾಪುರ: ಶ್ರೀ ವೆಂಕಟರಮಣ ಕಾಲೇಜಿನ 8 ಪ್ರಾಕ್ತನ ವಿದ್ಯಾರ್ಥಿಗಳು ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ.

ಕುಂದಾಪುರ: 2023 ಡಿಸೆಂಬರ್ ನಲ್ಲಿ ನಡೆದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಗಳಾದ ಪ್ರಣತಿ ಪಿ .ಗೋಟಾ , ನೇಹಾ ಎಸ್. ರಾವ್, ಜಯರಾಮ್ ಪೈ, ಅಶ್ವಥ್ ಕೆ, ಐಶ್ವರ್ಯ, ತೇಜಸ್ವಿನಿ, ತುಷಾರ್ ಪೂಜಾರಿ, ಸುಶ್ರುತ್ ಕುಮಾರ್ ತೇರ್ಗಡೆ ಹೊಂದಿರುತ್ತಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.