ಕಾರ್ಕಳ: ಶಬರಿಮಲೆಯಲ್ಲಿ ನಾಪತ್ತೆಯಾಗಿದ್ದ ಅಯ್ಯಪ್ಪ ಮಾಲಾಧಾರಿ ಪತ್ತೆ

ಕಾರ್ಕಳ: ಶಬರಿಮಲೆಗೆ ಹೋಗಿದ್ದ ಅಯ್ಯಪ್ಪ ಮಾಲಾಧಾರಿ ಆದಿತ್ಯ ಶೆಟ್ಟಿಗಾರ್ ಎಂಬವರು ಅಯ್ಯಪ್ಪನ ದರ್ಶನ ಪಡೆದು ಮರಳುವಾಗ ವಿಪರೀತ ಜನಸಂದಣಿಯಿಂದ ಬುಧವಾರ ಮುಂಜಾನೆಯಿಂದ ನಾಪತ್ತೆಯಾಗಿದ್ದರು.

ಇದೀಗ ಅವರು ಪತ್ತೆಯಾಗಿದ್ದು ಊರಿನತ್ತ ಮರಳಿ ಬರುತ್ತಿದ್ದಾರೆ ಎಂದು ಜೋಗಿನಕೆರೆ ಅಯ್ಯಪ್ಪ ಸೇವಾ ಸಮಿತಿಯ ಗುರು ಸ್ವಾಮಿ ಖಚಿತಪಡಿಸಿದ್ದಾರೆ‌.

ಅಯ್ಯಪ್ಪ ಮಾಲಾಧಾರಿಯಾಗಿದ್ದ ಆದಿತ್ಯ ಶೆಟ್ಟಿಗಾರ್ ತನ್ನ ಇತರ ಸಹವರ್ತಿ ಅಯ್ಯಪ್ಪ ಮಾಲಾಧಾರಿಗಳ ಜತೆಗೂಡಿ ಕಾರ್ಕಳ ಜೋಗಿನಕೆರೆ ಅಯ್ಯಪ್ಪ ಶಿಬಿರದಿಂದ ಶಬರಿಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಪಡೆದು ಮರಳಿ ಬರುವಾಗ ಶಬರಿಮಲೆಯಲ್ಲಿ ಭಕ್ತಾದಿಗಳ ದಟ್ಟಣೆಯಿಂದ ಆದಿತ್ಯ ಶೆಟ್ಟಿಗಾರ್ ಪಂಪೆಯಲ್ಲಿ ತನ್ನ ತಂಡದಿಂದ ಬೇರ್ಪಟ್ಟು ನಾಪತ್ತೆಯಾಗಿದ್ದರು. ಬಳಿಕ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಯತ್ನಿಸಿದೂ ನೆಟ್ ವರ್ಕ್ ಸಮಸ್ಯೆಯಿಂದ ಸಾಧ್ಯವಾಗಿಲ್ಲ.

ಇದೀಗ ಕಾಣೆಯಾದ ಆದಿತ್ಯ ಶೆಟ್ಟಿಗಾರ್ ಮತ್ತೆ ಪತ್ತೆಯಾಗಿದ್ದು ಮರಳಿ ಊರಿನತ್ತ ಬರುತ್ತಿದ್ದಾರೆ ‌ಆದಿತ್ಯ ನಾಪತ್ತೆದಿಂದ ಕಂಗಾಲಾಗಿದ್ದ ಅವರ ಪೋಷಕರು ಹಾಗೂ ಸಂಬಂಧಿಕರು ನಿಟ್ಟುಸಿರು ಬಿಡುವಂತಾಗಿದೆ.