ಕಾರ್ಕಳ: ಬಾಣಂತಿ ಮಹಿಳೆ ಮೃತ್ಯು.

ಕಾರ್ಕಳ: ಕಾರ್ಕಳ ತಾಲೂಕು ಇರ್ವತ್ತೂರಿನ ಜಂಗರಬೆಟ್ಟುವಿನಲ್ಲಿ ಬಾಣಂತಿ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಗುರುವಾರ ಸಂಭವಿಸಿದೆ.

ಮೃತಪಟ್ಟ ಮಹಿಳೆ ಇರ್ವತ್ತೂರಿನ ಸಂಪ್ರೀತಾ (34). ಸಂಪ್ರೀತಾ ಅವರು ಮೇ 30ರಂದು ತಮ್ಮ 2ನೇ ಮಗುವಿಗೆ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದು, ಬಳಿಕ ಮಗುವಿನ ಜತೆಯಲ್ಲಿ ತವರು ಮನೆಯಾದ ಇರ್ವತ್ತೂರು ಗ್ರಾಮದ ಜಂಗರಬೆಟ್ಟುವಿನಲ್ಲಿದ್ದು, ಜೂ. 6ರಂದು ಸಂಜೆ ಮನೆಯಲ್ಲಿದ್ದಾಗ ಅಸ್ವಸ್ಥಗೊಂಡ ಅವರನ್ನು ಅವರ ತಾಯಿ ಕುಶಲಾ ಮತ್ತು ಗಂಡ ಹರೀಶ್‌ ಅವರು ಕಾರ್ಕಳದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಮೃತಪಟ್ಟಿದ್ದಾರೆ.

ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.