ಕಾಪು: 11 ವರ್ಷದ ಬಾಲಕಿ ಮೃತ್ಯು.

ಕಾಪು: ಉಡುಪಿ ಕಾಪುವಿನ ಮಣಿಪುರ ಗ್ರಾಮದಲ್ಲಿ ಧಿಡೀರ್ ಅಸ್ವಸ್ಥಗೊಂಡು 11 ವರ್ಷದ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. 11 ವರ್ಷದ ಸಂದೇಶ್‌ ಅವರ ಪುತ್ರಿ ಧನ್ವಿ ಮೃತ ಬಾಲಕಿ. 4ನೇ ತರಗತಿ ಮುಗಿಸಿದ್ದ ಧನ್ವಿ ಪ್ರಸ್ತುತ ಶಾಲೆಗೆ ರಜೆಯಾಗಿರುವುದರಿಂದ ಮನೆಯಲ್ಲಿಯೇ ಇದ್ದಳು. ಮೇ.8ರಂದು ಮನೆ ಮಂದಿಯ ಜೊತೆ ಊಟ ಮಾಡಿ ಮಲಗಿದ್ದ ಬಾಲಕಿ ಧನ್ವಿಯು ಮೇ. 9ರಂದು ಬೆಳಗ್ಗಿ ನ ಜಾವ 3 ಗಂಟೆಯ ಸುಮಾರಿಗೆ ನಿದ್ರೆಯಿಂದ ಎದ್ದು ವಾಂತಿ ಮಾಡಲು ಆರಂಭಿಸಿದ್ದಾಳೆ. ಬಳಿಕ ಮನೆಯವರು ಆಕೆಯನ್ನು ಉಪಚರಿಸಿ ನೀರನ್ನು ಕೊಟ್ಟು ಮಲಗಿಸಿದ್ದರೂ, ಆಕೆ ಗಂಟೆಗೊಮ್ಮೆ ಎದ್ದು ವಾಂತಿ ಮಾಡುತ್ತಿದ್ದಳು.