ಉಡುಪಿXPRESS ಪರ್ಯಾಯ ವಿಶೇಷ ಸಂಚಿಕೆ “ಪರ್ಯಾಯ ಪುಣ್ಯೋತ್ಸವ” ಬಿಡುಗಡೆ

ಉಡುಪಿ: ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ಉಡುಪಿXPRESS ನ ವಿಶೇಷ ಸಂಚಿಕೆ “ಪರ್ಯಾಯ ಪುಣ್ಯೋತ್ಸವ” ವನ್ನು ಬುಧವಾರ ಕೃಷ್ಣಮಠದ ಕನಕದಾಸ ಮಂಟಪದಲ್ಲಿ ಬಿಡುಗಡೆಗೊಳಿಸಲಾಯಿತು.

ಪರ್ಯಾಯ ಪೀಠವೇರಲಿರುವ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಸಂಚಿಕೆ ಅನಾವರಣಗೊಳಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಪರ್ಯಾಯ ಉತ್ಸವ ಸಮಿತಿ, ಹೊರೆಕಾಣಿಕೆಯ ಸಮಿತಿಯ ಸದಸ್ಯರು, ಉಡುಪಿXPRESS ಮಾರುಕಟ್ಟೆ ವಿಭಾಗದ ಸ್ವರೂಪ್ ಶ್ರೀಯಾನ್, ಅಶೋಕ್, ನಿತಿನ್ ಉಪಸ್ಥಿತರಿದ್ದರು.