ಉಡುಪಿ: ಉಡುಪಿ ಸಿವಿಲ್ ಎಂಜಿನಿಯರ್ಸ್ ಎಸೋಸಿಯೇಶನ್ ಉದ್ಘಾಟನೆಯನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ಶನಿವಾರ ನೆರವೇರಿಸಿದರು. ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆ ನಿವಾರಣೆಯೊಂದಿಗೆ ನಗರ, ಅಭಿವೃದ್ಧಿ ವಿಸ್ತರಣೆ ನಿಟ್ಟಿನಲ್ಲಿ ಶ್ರೀಕೃಷ್ಣ ಕಾರಿಡಾರ್ ಯೋಜನೆಗೆ ಉಡುಪಿ ಸಿವಿಲ್ ಇಂಜಿನಿಯರ್ಸ್ ಎಸೋಸಿಯೇಶನ್ ಸಲಹೆ, ಸೂಚನೆ ನೀಡುವಂತೆ ಉಡುಪಿ ಶಾಸಕ ಯಶಪಾಲ ಸುವರ್ಣ ತಿಳಿಸಿದ್ದಾರೆ.

ಅವರು ಹೋಟೆಲ್ ಕಿದಿಯೂರು ಪವನ್ ರೂಫ್ ಟಾಪ್ ಸಭಾಂಗಣದಲ್ಲಿ ಉಡುಪಿ ಸಿವಿಲ್ ಎಂಜಿನಿಯರ್ಸ್ ಎಸೋಸಿಯೇಷನ್ ಉದ್ಘಾಟನೆ ಮತ್ತು ಲಾಂಛನ ಅನಾವರಣ ಮಾಡಿ ಶನಿವಾರ ಮಾತನಾಡಿದರು.
ವಿಶ್ವದಲ್ಲೆ ಉಡುಪಿ ಪ್ರಸಿದ್ಧಿ ಜತೆಗೆ ವೇಗದ ಪ್ರಗತಿ ಹೊಂದಲು ಎಂಜಿನಿಯರ್ಸ್ ಗಳ ಕೊಡುಗೆಯಿದೆ. ರಸ್ತೆ, ಕಟ್ಟಡಗಳಿಗೆ ನೀಲ ನಕಾಶೆಯೊಂದಿಗೆ ನಿರ್ಮಾಣ ಕ್ಷೇತ್ರಕ್ಕೆ ಕೊಡುಗೆ ಶ್ಲಾಘನೀಯ. ದೇಶ, ವಿದೇಶದ ಜನರು ಉಡುಪಿಯಲ್ಲಿ ಉದ್ಯಮ, ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದು ಉಡುಪಿ ನಗರದ ಸೌಂದರ್ಯ ಹೆಚ್ಚಳಕ್ಕೂ ಕಾರಣವಾಗಿದೆ. ಸರ್ ಎಂ.ವಿಶ್ವೇಶ್ವರಯ್ಯರಂತಹ ಸಾಧಕ ಎಂಜಿನಿಯರ್ ಗಳು ಮೂಡಿ ಬರಬೇಕು ಎಂದು ಹೇಳಿದರು.
ಎಂ ಐಟಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೋ. ಡಾ. ಕಿರಣ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ನೀಲಕಂಠ ಎಂ. ಹೆಗ್ಡೆ ಪದಗ್ರಹಣ ನೆರವೇರಿಸಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು ಪ್ರಮೋಶನ್ ಸ್ಟಿಕ್ಕರ್ ಬಿಡುಗಡೆ ಮಾಡಿದರು.
ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಡಿಯುಡಿಸಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನ ರಾಜ್ ಕೆ.ಎಂ., ಎಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಕೆ.ಹರೀಶ್ ಕುಮಾರ್, ಉಪಾಧ್ಯಕ್ಷ ಭರತ್ ಭೂಷಣ್, ಗಣೇಶ್ ಬೈಲೂರು, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಮಹಾಬಲೇಶ್ವರ ಭಟ್, ಸಂಘದ ಪಧಾಧಿಕಾರಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಮನೋರಂಜನಾ ಕಾರ್ಯಕ್ರಮ ಜರಗಿತು.
ದೇವಿಪ್ರಸಾದ್ ಪದಗ್ರಹಣ ಅಧಿಕಾರಿಯನ್ನು ಪರಿಚಯಿಸಿದರು. ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಪ್ರಾರ್ಥಿಸಿದರು. ಸ್ವಾತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಸಿವಿಲ್ ಎಂಜಿನಿಯರ್ಸ್ ಎಸೋಸಿಯೇಷನ್ ಅಧ್ಯಕ್ಷ ರಂಜನ್ ಸ್ವಾಗತಿಸಿದರು. ಕಾರ್ಯದರ್ಶಿ ಕೆ. ಹರೀಶ್ ವಂದಿಸಿದರು.














