ಉಡುಪಿ: ಸಾಯಿ ಸೋಶಿಯಲ್ ಸರ್ವಿಸ್ ಗ್ರೂಪ್ ಅಧ್ಯಕ್ಷರಾಗಿ ಸಾಯಿ ಪ್ರಸಾದ್ ಆಯ್ಕೆ

ಸಂತೆಕಟ್ಟೆ: ಸಾಯಿ ಪ್ರಸಾದ್ ಗ್ರೂಪ್ ಸಂತೆಕಟ್ಟೆ ಇದರ ಅಧ್ಯಕ್ಷರಾಗಿ ಸಾಯಿ ಪ್ರಸಾದ್ ಅವರು ಆಯ್ಕೆ ಆಗಿರುತ್ತಾರೆ.

ನೂತನ ಪದಾಧಿಕಾರಿಗಳಾಗಿ, ಶ್ರೀಮತಿ ಪ್ರೀತಿ, ಪ್ರಶಾಂತ್ ಅಮೀನ್, ಪ್ರೀತಿ ಪ್ರಸಾದ್,ಗೌರವ ಸಲಹೆಗರಾಗಿ, ಪುರಂದರ್ ಸಾಲಿಯಾನ್, ಹರೀಶ್ ಅಂಬಲಪಾಡಿ ಆಯ್ಕೆ ಆಗಿರುತ್ತಾರೆ. ಸಂಸ್ಥೆಯು ಹಲವು ವರ್ಷಗಳಿಂದ ಬಡ ಅನಾರೋಗ್ಯ ಪೀಡಿತ ಮಕಳ ಚಿಕಿತ್ಸೆ ಗೆ ನೆರವು ನೀಡುವುದು ಮುಖ್ಯ ಉದ್ದೇಶವಾಗಿದೆ. ಈ ಒಂದು ಕಾರ್ಯಕ್ಕೆ ಊರಿನ ದಾನಿಗಳು ಹಾಗೂ ನಮ್ಮ ಸಂಸ್ಥೆಯ ಸದಸ್ಯರ ಸಹಕಾರದಿಂದ ನಡೆದಿದೆ.

ಈ ಎಲ್ಲಾ ಕಾರ್ಯಕ್ರಮ ಸ್ಥಾಪಕ ಅಧ್ಯಕ್ಷರದ ಸತೀಶ್ ನಾಯಕ್, ನಿಕಟ ಪೂರ್ವ ಅಧ್ಯಕ್ಷರು ರಶೀದ್ ನೆಜಾರು, ಉಪಾಧ್ಯಕ್ಷರು ಪ್ರಕಾಶ್ ಪೂಜಾರಿ,ಕಾರ್ಯದರ್ಶಿ ಅಜಿತ್ ಅಂಬಲಪಾಡಿ ಹಾಗೂ ಸಂಸ್ಥೆಯ ಸದಸ್ಯರ ಸಹಕಾರದಿಂದ ನಡೆದಿದೆ.