ಉಡುಪಿ: ಸಾಂಪ್ರದಾಯಿಕ ತಿಂಡಿ-ತಿನಿಸುಗಳಿಗೆ ಹೆಸರುವಾಸಿಯಾದ ಬನ್ನಂಜೆಯ “ಉಡುಪಿ ಸ್ಟೋರ್ಸ್”

ಉಡುಪಿ: ಉಡುಪಿ ವಿ21 ಗ್ರೂಪ್ ನವರಿಂದ ಸಾಂಪ್ರದಾಯಿಕ ತಿಂಡಿ-ತಿನಿಸು ಹಾಗೂ ಕರಕುಶಲ ವಸ್ತುಗಳಿಗೆ ಹೆಸರುವಾಸಿಯಾದ ನೂತನ ಮಳಿಗೆ “ಉಡುಪಿ ಸ್ಟೋರ್ಸ್” ನ ಬನ್ನಂಜೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ನೆಲ ಮಹಡಿಯಲ್ಲಿ ಆರಂಭಗೊಂಡಿದ್ದು, ಈ ಮಳಿಗೆಯು ದಿನದ 24 ಗಂಟೆಯೂ ತೆರೆದಿರುತ್ತದೆ.

ವಿಶೇಷ ಸಾಂಪ್ರದಾಯಿಕ ತಿಂಡಿ ತಿನಿಸುಗಳ ಮಳಿಗೆ:
ವಿ21 ಗ್ರೂಪ್ನ ಉಡುಪಿಯ ಮೊದಲ ಮಳಿಗೆಯಲ್ಲಿ ಉಡುಪಿಯ ಸಾಂಪ್ರದಾಯಿಕ ವಿಶೇಷ ತಿಂಡಿ ತಿನಿಸುಗಳು, ಹಲವು ಬಗೆಯ ಉಪ್ಪಿನಕಾಯಿ, ಚಟ್ನಿ ಪುಡಿ, ಹಪ್ಪಳಗಳು, ಸ್ಕ್ವಾಷ್ ಮತ್ತು ಸಿರಪ್ಗಳು, ಎಲ್ಲ ತರಹದ ಬೇಕರಿ ಉತ್ಪನ್ನಗಳು, ದಿನಸಿ ಸಾಮಗ್ರಿಗಳು ಹಾಗೂ ಉಡುಪಿಯ ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಹಲವು ಬಗೆಯ ಆಲಂಕಾರಿಕ ವಸ್ತುಗಳು ಲಭ್ಯವಿವೆ.

ವಿ21 ಗ್ರೂಪ್ ಉಡುಪಿಯ ಬ್ರ್ಯಾಂಡ್ ಜಿಲ್ಲೆಯಲ್ಲಿ ಈಗಾಗಲೇ ಸಾಂಪ್ರದಾಯಿಕ ತಿಂಡಿ-ತಿನಿಸುಗಳು ಮತ್ತು ಕರಕುಶಲ ವಸ್ತುಗಳ ತಯಾರಿಯಲ್ಲಿ ಪ್ರಾವೀಣ್ಯಗಳಿಸಿದೆ.