ಉಡುಪಿ: ಪುತ್ತೂರು ಯಕ್ಷಗಾನ ತರಬೇತಿಗೆ ಚಾಲನೆ

ಉಡುಪಿ: ಉಡುಪಿ ಪುತ್ತೂರು ಶ್ರೀ ಭಗವತೀ ಯಕ್ಷಕಲಾ ಬಳಗದ ವತಿಯಿಂದ ತೆಂಕುತಿಟ್ಟು ಯಕ್ಷಗಾನ ಹೆಜ್ಜೆಗಾರಿಕೆ ತರಬೇತಿಯ ನೂತನ ತರಗತಿಯು ಭಾನುವಾರ ಪುತ್ತೂರು ಶ್ರೀ ಭಗವತೀ ದುರ್ಗಾಪರಮೇಶ್ವರೀ ದೇವಳದ ಶ್ರೀ ಭಗವತೀ ಸಭಾಗ್ರಹದಲ್ಲಿ ಪ್ರಾರಂಭಗೊಂಡಿತು. ಖ್ಯಾತ ಯಕ್ಷಗಾನ ಕಲಾವಿದ ವಾಸುದೇವರಂಗಾ ಭಟ್ ತರಬೇತಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು.

ಶ್ರೀ ಭಗವತೀ ಯಕ್ಷಕಲಾ ಬಳಗದ ಅಧ್ಯಕ್ಷ ಪ್ರಮೋದ್ ತಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಯಕ್ಷಗಾನ ಕಲಾವಿದ ಹಾಗು ಯಕ್ಷಗುರು ರಕ್ಷಿತ್ ಪಡ್ರೆ, ದೇವಳದ ಆಡಳಿತ ಮೊಕ್ತೇಸರ ಕೃಷ್ಣಮೂರ್ತಿ ಭಟ್, ಕಲಾ ಬಳಗದ ಉಪಾಧ್ಯಕ್ಷ ಸುಬ್ರಹ್ಮಣ್ಯ ಜೋಷಿ, ಸಾಂಸ್ಕೃತಿಕ ಕಾರ್ಯದರ್ಶಿ ರವಿನಂದನ್ ಭಟ್, ಮೋಹನ ಉಡುಪ, ಶ್ರೀ ಭಗವತೀ ಯಕ್ಷಕಲಾ ಬಳಗದ ಬಡಗು ತರಗತಿಯ ಸಂಚಾಲಕಿ ನಿರುಪಮಾ ಪ್ರಮೋದ್, ತೆಂಕು ತಿಟ್ಟು ಗುರು ಪ್ರಣಮ್ಯ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು.

ಉಭಯ ತಿಟ್ಟಗಳಲ್ಲಿ ಹೆಜ್ಜೆಗಾರಿಕೆ ಮತ್ತು ಹಿಮ್ಮೇಳ ತರಗತಿಗಳಲ್ಲಿ ಈಗಾಗಲೇ 130 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ನಿರತರಾಗಿದ್ದಾರೆ. ತೆಂಕುತಿಟ್ಟು ಹೆಜ್ಜೆಗಾರಿಕೆ ಗುರುಗಳಾಗಿ ಹನುಮಗಿರಿ ಮೇಳದ ಪ್ರಖ್ಯಾತ ಯಕ್ಷಗಾನ ಕಲಾವಿದ ರಕ್ಷಿತ್ ಶೆಟ್ಟಿ ಪಡ್ರೆ, ಬಡಗುತಿಟ್ಟು ಹಿಮ್ಮೇಳ ಮತ್ತು ಹೆಜ್ಜೆಗಾರಿಕೆ ಗುರುಗಳು ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ, ತೆಂಕುತಿಟ್ಟು ಹಿಮ್ಮೇಳ ಗುರುಗಳು ರಾಮ್ ಪ್ರಕಾಶ್ ಕಲ್ಲೂರಾಯ ತರಬೇತಿ ನೀಡಲಿದ್ದಾರೆ.