ಉಡುಪಿ ನಗರಸಭಾ ವ್ಯಾಪ್ತಿಯ ಖಾಲಿ ಸೈಟ್‌ಗಳಲ್ಲಿನ ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸಲು ಸೂಚನೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಖಾಸಗಿ ಖಾಲಿ ಜಾಗಗಳ ಕೆಲವು ಮಾಲೀಕರು ಸೈಟ್‌ಗಳನ್ನು ಖರೀದಿ ಮಾಡಿ, ಈ ಸೈಟ್‌ಗಳಲ್ಲಿ ಯಾವುದೇ ಪ್ರಗತಿ ಕಾಮಗಾರಿ ಕೈಗೊಳ್ಳದೇ ಹಲವಾರು ವರ್ಷಗಳಿಂದ ಹಾಗೆಯೇ ಖಾಲಿ ಬಿಟ್ಟಿದ್ದು, ಈ ಸ್ಥಳಗಳಲ್ಲಿ ಹುಲ್ಲು, ಗಿಡಗಂಟಿ, ಕಸ-ಕಡ್ಡಿ ಜೊತೆಗೆ ಅಪಾಯಕಾರಿ ಜೀವಜಂತುಗಳಾದ ವಿಷಪೂರಿತ ಹಾವು, ಇತರೆ ಜೀವಿಗಳು ವಾಸ್ತವ್ಯ ಹೂಡಿರುವುದರಿಂದ ಖಾಲಿ ಸ್ಥಳದ ಬದಿಮನೆಯವರಿಗೆ ವಿಷಪೂರಿತ ಜೀವಜಂತುಗಳಿoದ ತೊಂದರೆಯಾಗುತ್ತಿರುವುದಾಗಿ ಸಾರ್ವಜನಿಕರಿಂದ ದೂರುಗಳು ಬಂದಿರುತ್ತದೆ.

ಆದ್ದರಿಂದ ಖಾಲಿ ಸ್ಥಳಗಳಲ್ಲಿ ಯಾವುದೇ ಅಭಿವೃದ್ಧಿ ಕೈಗೊಳ್ಳದೆ ಹಲವಾರು ವರ್ಷಗಳಿಂದ ಹಾಗೇ ಬಿಟ್ಟಿರುವ ಹಾಗೂ ಖಾಲಿ ಸ್ಥಳದಲ್ಲಿ ಬೆಳೆದಿರುವ ಹುಲ್ಲು, ಕಸ-ಕಡ್ಡಿಗಳನ್ನು ಮಾಲೀಕರುಗಳು ಪ್ರಕಟಣೆಯ 15 ದಿನಗಳ ಒಳಗಾಗಿ ಸ್ವಚ್ಛ ಮಾಡಬೇಕು. ತಪ್ಪಿದ್ದಲ್ಲಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವುದರೊಂದಿಗೆ ದಂಡ ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.