ಉಡುಪಿ: ಕರಂಬಳ್ಳಿ ವೆಂಕಟರಮಣ ದೇವಸ್ಥಾನಕ್ಕೆ ಪುತ್ತಿಗೆ ಶ್ರೀ ಭೇಟಿ

ಉಡುಪಿ: ಪೂರ್ವಭಾವಿ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಮಂಗಳವಾರ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಳದ ಆಡಳಿತ ಮೊಕ್ತೇಸರ ಮಾಜಿ ಸಾಸಕ ಕೆ ರಘುಪತಿ ಭಟ್ , ದೇವಳದ ಅರ್ಚಕರು , ಟ್ರಸ್ಟಿಗಳು ಭಕ್ತಿ ಆದರದಿಂದ ಉಭಯ ಶ್ರೀಗಳನ್ನು ಬರಮಾಡಿಕೊಂಡರು .

ಇದೇ ಸಂದರ್ಭ ಶ್ರೀಗಳು ಕೋಟಿ ಗೀತಾಭಿಯಾನದ ಮೂಲಕ ವಿಶ್ವಗೀತಾ ಪರ್ಯಾಯೋತ್ಸವವನ್ನು ಸಂಕಲ್ಪಿಸಿರುವುದರ ದ್ಯೋತಕವಾಗಿ ಶ್ರೀ ಮಠದ ಪಟ್ಟದ ದೇವರು ಮತ್ತು ಭಗವದ್ಗೀತೆ ಗ್ರಂಥಗಳನ್ನು ಸಾಲಂಕೃತ ಬೆಳ್ಳಿ ಪಲ್ಲಕ್ಕಿ ಯಲ್ಲಿಟ್ಟು ಮಂಗಳರಾತಿ ಬೆಳಗಿ, ಚಂಡೆ ವಾದ್ಯ ಭಜನೆ ಸಹಿತ ದೇವಳದ ಆವರಣದಲ್ಲಿ ಭಗವದ್ಗೀತೋತ್ಸವವನ್ನು ನೇರವೇರಿಸಿದರು.