ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಅಜ್ಜರಕಾಡು ವಾರ್ಡಿನ ವಿದ್ಯಾರಣ್ಯ ರಸ್ತೆಯಲ್ಲಿ ಅಲಂಕಾರ್ ಟಾಕೀಸ್‌ನಿಂದ ಸಿಟಿ ಆಸ್ಪತ್ರೆ ತನಕ ಒಳಚರಂಡಿ ಜಾಲದ ಪೈಪ್‌ಲೈನ್ ಬದಲಾವಣೆ ಮಾಡಿ ಛೇಂಬರ್ ಪುನರ್ ನಿರ್ಮಾಣ ಕಾಮಗಾರಿಯ ಹಿನ್ನೆಲೆ, ಮಾರ್ಚ್ 3 ರಿಂದ ಮಾರ್ಚ್ 22 ರ ವರೆಗೆ ಸದರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ, ಬದಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರ ಕಛೇರಿ ಪ್ರಕಟಣೆ ತಿಳಿಸಿದೆ.












