ಉಚಿತ ಆರೋಗ್ಯಕರ ವೃದ್ಧಾಪ್ಯದ ಜಾಗೃತಿ ಮತ್ತು ಸ್ಕ್ರೀನಿಂಗ್ ಪರೀಕ್ಷೆ (ಸಮಗ್ರ ಆರೋಗ್ಯ ತಪಾಸಣೆ) ಕಾರ್ಯಕ್ರಮ

ಉಡುಪಿ: ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯು ಆರೋಗ್ಯವಂತ ವೃದ್ಧಾಪ್ಯದ ಅಧ್ಯಯನ ಕೇಂದ್ರ ಮತ್ತು ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಸಹಯೋಗದಲ್ಲಿ ಹಿರಿಯ ನಾಗರಿಕರ ಸಮುದಾಯಕ್ಕಾಗಿ ಮಹತ್ವದ ಕಾರ್ಯಕ್ರಮವನ್ನು ಪ್ರಕಟಿಸಿದೆ.

60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಿಗೆ ಉಚಿತ ಆರೋಗ್ಯಕರ ವೃದ್ಧಾಪ್ಯದ ಜಾಗೃತಿ ಮತ್ತು ಸ್ಕ್ರೀನಿಂಗ್ ಪರೀಕ್ಷೆ ಕಾರ್ಯಕ್ರಮವನ್ನು 2024 ರ ಜನವರಿ 23 ಮತ್ತು 24 ರಂದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಆಯೋಜಿಸಲಾಗಿದೆ.

ಈ ಕಾರ್ಯಕ್ರಮವು ಎರಡು ದಿನಗಳ ಕಾಲವಿದ್ದು ‘ಆರೋಗ್ಯಕರ ವೃದ್ಧಾಪ್ಯ: ಏನು, ಏಕೆ ಮತ್ತು ಹೇಗೆ?’ ಎಂಬ ವಿಷಯದ ಬಗ್ಗೆ ಬೆಳಿಗ್ಗೆ 10:30 ರಿಂದ 11:30 ಯ ವರೆಗೆ ಶೈಕ್ಷಣಿಕ ಕಾರ್ಯಕ್ರಮ ಸಹಾ ಇರುತ್ತದೆ. ಕಾರ್ಯಕ್ರಮವು ದೃಷ್ಟಿ ಮತ್ತು ಶ್ರವಣ ಪರೀಕ್ಷೆಗಳು, ಸ್ಮರಣೆ ಮತ್ತು ಮಾನಸಿಕ ಆರೋಗ್ಯ ತಪಾಸಣೆಗಳು, ಬೀಳುವಿಕೆಯ ಅಪಾಯದ ವಿಶ್ಲೇಷಣೆ, ಮಧುಮೇಹ-ಪಾದದ ತಪಾಸಣೆ ಮತ್ತು ಕ್ರಿಯಾತ್ಮಕ ಸಾಮರ್ಥ್ಯದ ತಪಾಸಣೆಗಳನ್ನು ಒಳಗೊಂಡ ಸಮಗ್ರ ಆರೋಗ್ಯ ತಪಾಸಣೆ ಸೇವೆಗಳನ್ನು ಸಹ ನೀಡುತ್ತದೆ. ಜನವರಿ 24, ಬುಧವಾರ, ಉಚಿತ ಮೂಳೆ ಖನಿಜ ಸಾಂದ್ರತೆಯ (BMD) ಪರೀಕ್ಷೆ ಕೂಡ ಲಭ್ಯವಿರುತ್ತದೆ.

ಡಾ. ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಮತ್ತು ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ನ ಡೀನ್ ಡಾ ಅರುಣ್ ಮಯ್ಯ, ಹಾಗೂ ಡಾ.ಸೆಬಾಸ್ಟಿಯನ್ ಅನಿತಾ ಡಿಸೋಜಾ, ಆರೋಗ್ಯವಂತ ವೃದ್ಧಾಪ್ಯದ ಅಧ್ಯಯನ ಕೇಂದ್ರ, ಮಾಹೆ ಈ ಕಾರ್ಯಕ್ರಮದ ಮಹತ್ವವನ್ನು ಒತ್ತಿ ಹೇಳುತ್ತಾ, “ನಾವು ವಯಸ್ಸಾದಂತೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ.

ಈ ಕಾರ್ಯಕ್ರಮವು ಕೇವಲ ಸ್ಕ್ರೀನಿಂಗ್ ಪರೀಕ್ಷೆಗಳ ಬಗ್ಗೆ ಅಲ್ಲ; ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ನಮ್ಮ ಹಿರಿಯರಿಗೆ ಶಿಕ್ಷಣ ನೀಡಲು ಮತ್ತು ಅಧಿಕಾರ ನೀಡಲು ಇದು ಒಂದು ಅವಕಾಶ. ಈ ಮೌಲ್ಯಯುತ ಸೇವೆಗಳ ಲಾಭವನ್ನು ಪಡೆಯಲು ನಾವು ಎಲ್ಲಾ ಅರ್ಹ ವ್ಯಕ್ತಿಗಳಿಗೆ ಆಹ್ವಾನ ನೀಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಭಾಗವಹಿಸಲು ಇಚ್ಚಿಸುವವರು ಮುಂಚಿತವಾಗಿ ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸಲು ವಿನಂತಿಸಲಾಗಿದೆ. ಸಂಜೆ 5 ಗಂಟೆಯ ಮೊದಲು 916364564541 ಗೆ ತಮ್ಮ ಹೆಸರಿನೊಂದಿಗೆ ಕರೆ ಮಾಡುವ ಮೂಲಕ ಅಥವಾ ವಾಟ್ಸಾಪ್ ಸಂದೇಶ ಕಳುಹಿಸುವ ಮೂಲಕ ಅಪಾಯಿಂಟ್‌ಮೆಂಟ್ ಗಳನ್ನು ತೆಗೆದುಕೊಳ್ಳಬಹುದು ಎಂದು ಡಾ ಶಶಿಕಿರಣ್ ಉಮಾಕಾಂತ್ ವೈದ್ಯಕೀಯ ಅಧೀಕ್ಷಕರು, ಡಾ ಟಿ ಎಂ ಎ ಪೈ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.