ಈನಾಡು ಪತ್ರಿಕೆ- ತೆಲುಗು ಈಟಿವಿ, ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಹೈದರಾಬಾದ್‌: ಈನಾಡು ಪತ್ರಿಕೆ, ತೆಲುಗು ಈಟಿವಿ ಹಾಗೂ ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ಅವರು ಶನಿವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.ಈಚೆಗೆ ಅನಾರೋಗ್ಯಕ್ಕೊಳಗಾಗಿದ್ದ ರಾಮೋಜಿ ರಾವ್ ಅವರನ್ನು ಹೈದರಾಬಾದ್‌ನ ಸ್ಟಾ‌ರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ 3 ಗಂಟೆ ಸೂಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.