ಆಗುಂಬೆ: ಸಿಡಿಲು ಬಡಿದು ವ್ಯಕ್ತಿ ಮೃತ್ಯು.

ತೀರ್ಥಹಳ್ಳಿ: ತೋಟದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ನಡೆದಿದೆ.

ಮೃತ ದುರ್ದೈವಿ ನಾಗೇಂದ್ರ ಬಿನ್ ಸೀನ ಪೂಜಾರಿ ಎಂದು ಗುರುತಿಲಾಗಿದೆ.

ಇವರು ಬೀದರಗೋಡು ಗ್ರಾಮದವರಾಗಿದ್ದು ಬಾಳೆಹಳ್ಳಿ ಗ್ರಾಮದ ಗುಜುಗೊಳ್ಳಿ ಕೇಶವ ಕಿಣಿ ಬಿನ್ ವಿಠಲ್ ಕಿಣಿ ಇವರ ಅಡಿಕೆ ತೋಟದಲ್ಲಿ ಕಳೆ ತೆಗೆಯುವ ಸಂದರ್ಭದಲ್ಲಿ ಸಿಡಿಲು ಬಡಿದು ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.