ಅಮಾಸೆಬೈಲು: ಪೋಕ್ಸೋ ಪ್ರಕರಣ – ಆರೋಪಿಗೆ ಜೂ.21ರ ತನಕ ನ್ಯಾಯಾಂಗ ಬಂಧನ

ಅಮಾಸೆಬೈಲು: ಪೋಕ್ಸೋ ಪ್ರಕರಣದ ಆರೋಪಿ ಶಂಕರನಾರಾಯಣ ಗ್ರಾಮದ ಶ್ರೇಯಾ ನಾಯ್ಕನನ್ನು ಪೊಲೀಸರು ಶುಕ್ರವಾರ ಸಿದ್ದಾಪುರದಲ್ಲಿ ಬಂದಿಸಿದ್ದಾರೆ.

ಆರೋಪಿ ಶ್ರೇಯಾ ನಾಯ್ಕ ವಿರುದ್ಧ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಮೇ18ರಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಆರೋಪಿಯು ತಲೆ ಮರೆಸಿಕೊಂಡಿದ್ದು, ಪೊಲೀಸರು ತಂಡ ರಚಿಸಿಕೊಂಡು ಆರೋಪಿಗಾಗಿ ಬಲೆ ಬಿಸಿದರು. ಶಿವಮೊಗ್ಗದಿಂದ ಬಸ್‌ನಲ್ಲಿ ಬರುತ್ತಿರುವ ಖಚಿತ ಮಾಹಿತಿಯ ಮೇರೆಗೆ ಸಿದ್ದಾಪುರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇದೀಗ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದೆ. ನ್ಯಾಯಾಲಯವು ಜೂ.21ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಏನಿದು ಪ್ರಕರಣ:
ಆರೋಪಿ ಶ್ರೇಯಾ ನಾಯ್ಕ ಶಂಕರನಾರಾಯಣ ಗ್ರಾಮದ ಅಮಾಸೆಬೈಲು ನಿವಾಸಿಯಾಗಿದ್ದು, ಪಿಯುಸಿ ವಿದ್ಯಾರ್ಥಿನಿಯನ್ನು ಪರಿಚಯಿಸಿಕೊಂಡು ಪ್ರೀತಿಯ ನಾಟಕವಾಡುತ್ತಿದ್ದನ್ನು. ಅಪ್ರಾಪೆಯನ್ನು ಮದುವೆಯಾಗುದ್ದಾಗಿ ನಂಬಿಸಿ, ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಸುತ್ತಾಡಿಸುತ್ತಿದ್ದನ್ನು. ಪುಸಲಾಯಿಸಿ ತನ್ನ ಕಾರಿನಲ್ಲಿ ಅಮಾಸೆಬೈಲುನಿಂದ ಹಾಲಾಡಿ ರಸ್ತೆಯ ಹೆಗ್ಗೊಡ್ಲು ಎಂಬಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಕಾರಿನಲ್ಲಿ ದೈಹಿಕ ಸಂಪರ್ಕ ಬೆಳೆಸಿದನ್ನು. ಅರೆ ಬೆತ್ತಲೆ ಪೋಟೋವನ್ನು ಮೊಬೈಲ್‌ನಲ್ಲಿ ಕ್ಲಿಕ್‌ಸಿಕೊಂಡು, ನಿರಂತರವಾಗಿ ಅತ್ಯಚಾರ ನಡೆಸುತ್ತಿದ್ದನ್ನು ಎಂದು ದೂರಿನಲ್ಲಿ ತಿಳಿಸಲಾಗಿದೆ.