ಮತ್ತೆ ಬಂದಿದೆ ಹೋಳಿ ಹಬ್ಬ. ಇದು ಬಣ್ಣಗಳ ಹಬ್ಬ ಪರಸ್ಪರ ಬಣ್ಣಗಳನ್ನು ಹಚ್ಚಿ ಸಂಭ್ರಮಿಸುವುದು ಈ ಹಬ್ಬದ ಸಂಪ್ರದಾಯ. ಆದರೆ ಇದೀಗ ಬಣ್ಣಗಳ ಬಗ್ಗೆಯೂ ಆಹಾರ ಪದಾರ್ಥಗಳ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಲರ್ಟ್ ಆಗಿದ್ದು ಕೆಮಿಕಲ್ ಹಾಕಿ ಬಣ್ಣಗಳನ್ನು ತಯಾರಿಸುವ ಕಂಪೆನಿಗಳ ಖಡಕ್ ಸೂಚನೆ ನೀಡಿದೆ.
ಹೋಳಿ ಹಬ್ಬ ಬಂತಂದ್ರೆ ಸಾಕು ಅಂಗಡಿಗಳಲ್ಲಿ ವಿವಿಧ ಬಣ್ಣಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ ಈ ಬಣ್ಣಗಳಲ್ಲಿ ಕೆಮಿಕಲ್ ಪ್ರಮಾಣವೇ ಹೆಚ್ಚು. ಅದು ತ್ವಚೆಗೆ, ಚರ್ಮಕ್ಕೆ ಭಾರೀ ತೊಂದರೆ ಉಂಟುಮಾಡುತ್ತದೆ. ಅದರಲ್ಲೂ ಈಗ ಬೇಸಿಗೆ ಬಿಸಿಲು ಇರುವುದರಿಂದ ರಾಸಾಯನಿಕ ಬಣ್ಣ ಚರ್ಮಕ್ಕೆ ಇನ್ನಷ್ಟು ಹಾನಿ ಉಂಟುಮಾಡುತ್ತದೆ.
ಈ ಹಿನ್ನಲೆ ಆರೋಗ್ಯದ ದೃಷ್ಠಿಕೋದಿಂದ ಕೆಮಿಕಲ್ ಅಳವಡಿಸಿದ ಬಣ್ಣ ಮಾರಾಟಕ್ಕೆ ಬ್ರೇಕ್ ಹಾಕುವಂತೆ ಆಹಾರ ಪದಾರ್ಥಗಳ ಸುರಕ್ಷಿತೆ ಹಾಗೂ ಗುಣಮಟ್ಟ ಇಲಾಖೆ ಎಚ್ಚರಿಕೆ ನೀಡಿದೆ. ಜೊತೆಗೆ ನ್ಯಾಚುರಲ್ ಎನ್ನಿಸುವ ಬಣ್ಣಗಳನ್ನೇ ಗ್ರಾಹಕರು ಹೆಚ್ಚಾಗಿ ಬಳಸಬೇಕು ಎಂದೂ ಸೂಚನೆ ನೀಡಿದೆ.












