ಹೆಬ್ರಿ ಚಾಣಕ್ಯ ಸಂಸ್ಥೆಯಲ್ಲಿ ಕರಾಟೆ ತರಬೇತಿ ಉದ್ಘಾಟನೆ

ಹೆಬ್ರಿ: ದೈಹಿಕ ಹಾಗೂ ಮಾನಸಿಕ ಸದೃಡತೆಯ ಜತೆ ನಮ್ಮ ಆತ್ಮರಕ್ಷಣೆಗೆ ಕರಾಟೆ ಸಹಕಾರಿ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ಉಡುಪಿ ಜಿಲ್ಲೆಯಲ್ಲಿಯೇ ಶಿಕ್ಷಣ ಮಾತ್ರವಲ್ಲದೆ ಎಲ್ಲಾ ಕಲಾ ಪ್ರಕಾರಗಳನ್ನು ಒಂದೆ ಸೂರಿನ ನೀಡಿ ಇದೀಗ ಕರಾಟೆ ತರಗತಿಯನ್ನು ಅಂತಾರಾಷ್ಟ್ರೀಯ ಮಟ್ಟದ ತರಬೇತುದಾರರಿಂದ ನೀಡುತ್ತಿರುವುದು ಶ್ಲಾಘನೀಯ ಎಂದು ಮೂಡುಬಿದಿರೆ ತಾ| ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಹೇಳಿದರು.

ಅವರು ಹೆಬ್ರಿ ಎಸ್‌ಆರ್‌ಬಳಿ ಇರುವ ಚಾಣಕ್ಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆರಂಭಗೊಂಡ ಕರಾಟೆ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.

ಕರಾಟೆ ಹೊಡೆದಾಟ ಅಲ್ಲ

ಹೆಚ್ಚಿನ ಪೋಷಕರಲ್ಲಿ ಕರಾಟೆ ಎನ್ನುವುದು ಹೊಡೆದಾಟ ಎಂಬ ತಪ್ಪು ಕಲ್ಪನೆ ಇದೆ. ಯಾವುದೇ ಶಸ್ತ್ರ‍ಾಸ್ತ್ರವಿಲ್ಲದೆ ತಮ್ಮನ್ನು ತಾನು ರಕ್ಷಣೆ ಮಾಡುವೆ ಕಲೆಯೆ ಕರಾಟೆ. ಹೆಣ್ಣು ಮಕ್ಕಳಿಗೆ ಕರಾಟೆ ಅತೀ ಅಗತ್ಯ. ಅಂತಹ ಕರಾಟೆ ತರಗತಿ ಜೊತೆ ನೆನಪು ಶಕ್ತಿ ಹೆಚ್ಚಿಸುವ ಹಾಗೂ ಏಕಾಗ್ರತೆಗೆ ಪೂರಕವಾದ ಅಂಗೈಯಲ್ಲಿ ಆರೋಗ್ಯ ಎಂಬ ಕಾರ್ಯಕ್ರಮವನ್ನು ಉಚಿತವಾಗಿ ಹೇಳಿ ಕೊಡಲಾಗುತ್ತದೆ ಎಂದು ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಗುರು ಡಾ. ವಿಜಯಲಕ್ಷ್ಮೀ ಆರ್. ನಾಯಕ್ ಹೇಳಿದರು.

ಪ್ರವೇಶ ಶುಲ್ಕ ಉಚಿತ:

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಕರಾಟೆ ಗುರುಗಳಿಂದ ಪ್ರತಿ ಶನಿವಾರ ಮಧ್ಯಾಹ್ನ 3ರಿಂದ 4 ರ ತನಕ ಕರಾಟೆ ತರಗತಿ ನಡೆಯಲಿದ್ದು ಪರೀಕ್ಷೆ ತರಗತಿ ಎದುರಿಸುವ ವಿದ್ಯಾರ್ಥಿಗಳು ಕೂಡ ಸೇರ್ಪಡೆಗೊಂಡು ಓದುವ ಹಾಗೂ ನೆನಪು ಶಕ್ತಿ ಹೆಚ್ಚಿಸುವ ಮಾಹಿತಿ ಉಚಿತವಾಗಿ ಪಡೆಯಬಹುದು. ಕರಾಟೆಗೆ ಸೇರಿದವರಿಗೆ ಅಂಗೈಯಲ್ಲಿ ಆರೋಗ್ಯ ತರಗತಿ ಉಚಿತವಾಗಿದ್ದು ಫೆ.29ರ ಒಳಗೆ ಪ್ರವೇಶ ಪಡೆದವರಿಗೆ ಪ್ರವೇಶ ಶುಲ್ಕ ರೂ.1000 ಉಚಿತವಾಗಲಿದೆ.

ಆಸಕ್ತರು ಕೂಡಲೇ ಹೆಸರನ್ನು ನೊಂದಾಯಿಸುವಂತೆ ಸಂಸ್ಥೆಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪಾಂಶುಪಾಲೆ ವೀಣಾ ಯು,ಶೆಟ್ಟಿ ವಹಿಸಿದ್ದರು.

ಈ ಸಂದರ್ಭದಲ್ಲಿ ಕರಾಟೆ ಗುರು ಸೋಮನಾಥ ಡಿ.ಸುವರ್ಣ, ಚಾರ ನವೋದಯ ವಿದ್ಯಾಲಯದ ಈಶ್ವರ್, ಚಾಣಕ್ಯ ಮೆಲೋಡಿಸ್ ನ ನಿತ್ಯಾನಂದ ಭಟ್ ಮೊದಲಾದವರು ಉಪಸ್ಥಿತರಿದ್ದರು. ಧನ್ಯ ಯು.ಪ್ರಾಥಿ೯ಸಿದರು. ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.