ಹಿರಿಯಡ್ಕ: ಉಡುಪಿ ಭಜನಾ ಪರಿಷತ್ ವತಿಯಿಂದ ಉಚಿತ ಕುಣಿತ ಭಜನಾ ತರಬೇತಿ ಶಿಬಿರ

ಹಿರಿಯಡಕ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಉಡುಪಿ ತಾಲೂಕು ಇದರ ವತಿಯಿಂದ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಹಿರಿಯಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ.) ಉಡುಪಿ ತಾಲೂಕು ಹಾಗೂ ಎಸ್.ವಿ.ಟಿ. ಕರಸೇವಕರು ಹಿರಿಯಡ್ಕ ಇವರ ಜಂಟಿ ಸಹಯೋಗದಲ್ಲಿ ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನೊಂದಾಯಿತ ಶಿಬಿರಾರ್ಥಿಯವರಿಗೆ ನಡೆಯುವ 5 ದಿನಗಳ ಉಚಿತ ಕುಣಿತ ಭಜನಾ ತರಬೇತಿ ಶಿಬಿರವು ಹಿರಿಯಡ್ಕ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ರಂಗನಾಥ ಭಟ್ ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾಯಿತು.

ರಾಜ್ಯ ಭಜನಾ ಪರಿಷತ್ತಿನ ಉಪಾಧ್ಯಕ್ಷರಾದ ಶ್ರೀ ರಾಜೇಂದ್ರ ಕುಮಾರ್ ಕುಂದಾಪುರ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇವರೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಉಡುಪಿ ತಾಲೂಕು ಅಧ್ಯಕ್ಷರಾದ ಶ್ರೀ ವಿಜಯ ಶೆಟ್ಟಿ ಕೊಂಡಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ತಾಲೂಕು ಯೋಜನಾಧಿಕಾರಿ ಶ್ರೀ ರಾಮು ಎಂ, ಶ್ರೀ ವೀರಭದ್ರ ದೇವಸ್ಥಾನದ ಕರ ಸೇವಕರ ಪ್ರಮುಖರಾದ ಶ್ರೀ ಶ್ರೀನಿವಾಸ ರಾವ್ ಹಿರಿಯಡ್ಕ, ಉಡುಪಿ ಜಿಲ್ಲೆಯ ಭಜನಾ ಪರಿಷತ್ ಸಮನ್ವಯಾಧಿಕಾರಿ ಶ್ರೀ ರಾಘವೇಂದ್ರ ಮುದ್ರಾಡಿ, ಉಡುಪಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಸತ್ಯಾನಂದ ನಾಯಕ್ ಆತ್ರಾಡಿ, ಭಜನಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶ್ರೀ ಶಿವಕುಮಾರ್ ಅಂಬಲಪಾಡಿ, ಭಜನಾ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿ ಪೇತ್ರಿ, ಕಾರ್ಯಕ್ರಮದ ಗೌರವ ಸಲಹೆಗಾರರಾಗಿ ಶ್ರೀ ನಟರಾಜ್ ಹೆಗ್ಡೆ ಹಿರಿಯಡ್ಕ ಸಹಕರಿಸಿದರು.

ಈ ಕಾರ್ಯಕ್ರಮವು ಪ್ರಪ್ರಥಮ ಬಾರಿಗೆ ಜಿಲ್ಲೆಯ ನುರಿತ ತರಬೇತುದಾರರಿಂದ ಎಲ್ಲಾ ಭಜಕರ, ತರಬೇತುದಾರರ ಹಾಗೂ ಭಜನಾಸಕ್ತರ ಸಹಕಾರದಿಂದ ನಡೆಯಲಿರುವುದು. ಶಿಬಿರಾರ್ಥಿಗಳೆಲ್ಲರೂ ತಾಳದೊಂದಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಬಂದು ತರಬೇತಿಯ ಮುಕ್ತಾಯದವರೆಗೆ ಹಾಜರಿದ್ದರು. ಈ ತರಬೇತಿಗೆ ಆಗಮಿಸಿದ ಇವರೆಲ್ಲರಿಗೂ ಶ್ರೀ ಕ್ಷೇತ್ರದ ವತಿಯಿಂದ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಇಂದು ಭಜನಾ ಮಂಡಳಿಯವರು, ಮಕ್ಕಳು, ಯುವಕ, ಯುವತಿಯರು ಹಾಗೂ ಭಜನಾಸಕ್ತರು ಸೇರಿ ಸುಮಾರು 300 ಕ್ಕಿಂತಲೂ ಅಧಿಕ ಮಂದಿ ತರಬೇತುದಾರ ಶ್ರೀ ಪ್ರಕಾಶ್ ಮಂದಾರ್ತಿ ಇವರ ಜೊತೆಗೆ ತಾಲೂಕು ಭಜನಾ ಪರಿಷತ್ತಿನ ಕೋಶಾಧಿಕಾರಿ ಹಾಗೂ ಮುಂದಿನ ಶಿಬಿರದ ಪ್ರಮುಖ ತರಬೇತುದಾರರಾದ ಪೂರ್ಣಿಮಾ ಪೆರ್ಡೂರು, ನಿತ್ಯಾನಂದ್ ಕಬ್ಯಾಡಿ, ರೋಹಿತ್ ಕಬ್ಯಾಡಿ ಸಾರಥ್ಯದ ತರಬೇತಿಯಲ್ಲಿ ಪಾಲ್ಗೊಂಡು ಈ ವಿಶೇಷ ಕಾರ್ಯಕ್ರಮದ ಸಂಪೂರ್ಣ ಸದುಪಯೋಗ ಪಡೆದುಕೊಂಡರು.

ಈ ಸಂಧರ್ಭದಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀಮತಿ ನಳಿನಾದೇವಿ, ವಿವಿಧ ಭಜನಾ ಮಂಡಳಿಗಳ ಅಧ್ಯಕ್ಷರುಗಳು ಹಾಗೂ ಪ್ರಮುಖರಾದ ಕೊಂಡಾಡಿಯ ಶ್ರೀ ನಿತೀಶ್ ಕುಮಾರ್ ಶೆಟ್ಟಿ,ಮಾಣೈ ಮುಖ್ಯಪ್ರಾಣ ಮಠದ ಶ್ರೀಮತಿ ವಿನೋದ ಶೆಡ್ತಿ, ಕಬ್ಯಾಡಿಯ ಶ್ರೀ ಪ್ರಭಾಕರ್ ಶೆಟ್ಟಿ, ಕೈರಾಳಿಯ ಶ್ರೀ ಸುಭಾಶ್ ಶೆಟ್ಟಿ, ಪೆರ್ಣಂಕಿಲದ ಶ್ರೀ ರಾಮ ನಾಯ್ಕ್, ಮೂಡು ಅಂಜಾರಿನ ಶ್ರೀ ದಿನೇಶ್ ಪೂಜಾರಿ, ಅಂಜಾರು ಬಜೆಯ ಶ್ರೀ ಸುಂದರ್, ಯೋಜನೆಯ ಹಿರಿಯಡ್ಕ ವಲಯ ಮೇಲ್ವಿಚಾರಕ ಸಂತೋಷ್, ಒಕ್ಕೂಟದ ಹಿರಿಯಡ್ಕ ವಲಯಾದ್ಯಕ್ಷರಾದ ಶ್ರೀ ಗಣೇಶ್ ನಾಯಕ್, ಉದ್ಯಮಿ ಶ್ರೀ ಉಮೇಶ್ ಶೆಟ್ಟಿ, ಶ್ರೀ ಗೋಪಾಲ್ ಸೇರಿಗಾರ್, ಶ್ರೀ ಶಂಕರ ಆಚಾರ್ಯ, ಶ್ರೀ ಗೋಕುಲದಾಸ ನಾಯಕ್, ಶ್ರೀ ರಮೇಶ್ ದೇವಾಡಿಗ, ಚೇತನ್ ಪೆರ್ಡೂರು, ಮತ್ತಿತರ ಭಜನಾ ಮಂಡಳಿಯ ಪದಾಧಿಕಾರಿಗಳು, ಧರ್ಮಸ್ಥಳ ಯೋಜನೆಯ ಪದಾಧಿಕಾರಿಗಳು,ಹಾಗೂ ಶ್ರೀ ವೀರಭದ್ರ ದೇವಸ್ಥಾನದ ಕರ ಸೇವಕರು ಉಪಸ್ಥಿತರಿದ್ದರು.