ಹಿರಿಯಡಕ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ಲಿ)ನ ಹಿರಿಯಡ್ಕ ಶಾಖೆಯ ಸ್ಥಳಾಂತರ ಮತ್ತು ಸೇಫ್ ಲಾಕರ್ ಸೌಲಭ್ಯದ ಉದ್ಘಾಟನಾ ಸಮಾರಂಭವು ಆ.18ರಂದು ನಡೆಯಿತು.
ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಸುರೇಶ ಶೆಟ್ಟಿ ಗುರ್ಮೆ ಇವರ ಅಮೃತ ಹಸ್ತದಿಂದ ಸ್ಥಳಾಂತರಿತ ಶಾಖೆಯ ಉದ್ಘಾಟನೆ ನೆರವೇರಿತು. ಹಾಗೂ ಸೇಫ್ ಲಾಕರ್ ಸೌಲಭ್ಯದ ಉದ್ಘಾಟನೆಯನ್ನು ಮಂಗಳೂರಿನ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ಗೋಕುಲ್ ದಾಸ್ ನಾಯಕ್ ಅವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಬೊಮ್ಮರಬೆಟ್ಟು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಜಯಂತಿ ಶೆಟ್ಟಿ, ಆರ್.ಎಸ್.ಬಿ ಸಂಘ ಮಣಿಪಾಲ ಇದರ ಅಧ್ಯಕ್ಷರಾದ ಶ್ರೀ ಶ್ರೀಶ ನಾಯಕ್ ಪೆರ್ಣಂಕಿಲ ಹಾಗೂ ಹಿರಿಯಡ್ಕದ ಪ್ರತಿಷ್ಟಿತ ಉದ್ಯಮಿಗಳಾದ ಶ್ರೀ ನಟರಾಜ್ ಹೆಗ್ಡೆ ಅವರು ಉಪಸ್ಥಿತರಿದ್ದರು.
ಸೊಸೈಟಿಯ ಅಧ್ಯಕ್ಷರಾದ ಶ್ರೀ ಅಶೋಕ್ ಕಾಮತ್ ಕೊಡಂಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷರಾದ ಶ್ರೀ ಪಾಂಡುರಂಗ ಕಾಮತ್ ಮತ್ತು ಸೊಸೈಟಿಯ ನಿರ್ದೇಶಕರೂ ಮತ್ತು ಹಿರಿಯಡ್ಕ ಶಾಖೆಯ ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ವಿಜೇತ್ ಕುಮಾರ್ ಬೆಳ್ಳಾರ್ಪಡಿ ಸೇರಿದಂತೆ ಸೊಸೈಟಿಯ ಇನ್ನಿತರ ನಿರ್ದೇಶಕರು ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಕರಾದ ಶ್ರೀ ನಿತ್ಯಾನಂದ ನಾಯಕ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಸೊಸೈಟಿಯ ಸಿಬ್ಬಂದಿಗಳು ಮತ್ತು ಸೊಸೈಟಿಯ ಸದಸ್ಯರು, ಅತಿಥಿ ಅಭ್ಯಾಗತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.