ಹಿರಿಯಡಕ: ವಾಲಿಬಾಲ್ ಪಂದ್ಯಾಟ ಇಂಡಿಪೆಂಡೆನ್ಸ್ ಟ್ರೋಫಿ-2024: ಯುವ ಭಾಂದವರು ಬೊಮ್ಮರಬೆಟ್ಟು ಹಿರಿಯಡ್ಕ ತಂಡ ಪ್ರಥಮ.

ಹಿರಿಯಡಕ: ಎಂಕುಲ್ ಫ್ರೆಂಡ್ಸ್ ಕಲಾವಿದರು (ರಿ.) ಹಿರಿಯಡಕ ಇವರ ಆಶ್ರಯ ಹಾಗೂ ನೇತೃತ್ವದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ ಅಂಡರ್ 20 ವಯೋಮಾನದ ಬಾಲಕರ ವಾಲಿಬಾಲ್ ಪಂದ್ಯಾಟ ಇಂಡಿಪೆಂಡೆನ್ಸ್ ಟ್ರೋಫಿ-2024 ರಲ್ಲಿ ಯುವ ಭಾಂದವರು ಬೊಮ್ಮರಬೆಟ್ಟು ಹಿರಿಯಡ್ಕ ತಂಡವು ಗೆದ್ದು, ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಇಶಾನ್ ಸ್ಟ್ರೈಕರ್ಸ್ ತಂಡವು ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು.

ಉದ್ಘಾಟನಾ ಸಮಾರಂಭದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಇದರ ಸಂಸ್ಥಾಪಕರಾದ ಡಾ.ಶಿವಕುಮಾರ್ ಕರ್ಜೆ ಅವರ ದಿವ್ಯ ಹಸ್ತದಿಂದ ಪಂದ್ಯಕೂಟಕ್ಕೆ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಸಾಲಿಯಾನ್, ಕೋಟ್ನಕಟ್ಟೆ ಫ್ರೆಂಡ್ಸ್’ನ ಅಧ್ಯಕ್ಷ ಸತ್ಯಪ್ರಸಾದ್, ಕೋಟ್ನಕಟ್ಟೆ ಫ್ರೆಂಡ್ಸ್ ನ ಮಾಜಿ ಅಧ್ಯಕ್ಷ ದೇವದಾಸ್ ಮರಾಟೆ, ಹಾಗೂ ನಿತ್ಯಾನಂದ ಪೂಜಾರಿ ಕೋಟ್ನಕಟ್ಟೆ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದ ಗಣ್ಯ ಉಪಸ್ಥಿತಿಯಲ್ಲಿ ಚಿತ್ರಕಲಾ ಶಿಕ್ಷಕ ಮೋಹನ ಕಡಬ, ಉದ್ಯಮಿ ಶೈಲೇಶ್ ಹಾಗೂ ಅರ್ಚಕರಾದ ನಾಗರಾಜ್ ಅಡಿಗ ಉಪಸ್ಥಿತರಿದ್ದರು.

ಸಚಿನ್ ಪಾಡಿಗಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸತತವಾಗಿ ಮೂರನೇ ವರ್ಷ ನಡೆದ ಈ ಪಂದ್ಯಕೂಟದಲ್ಲಿ 22 ತಂಡಗಳು ಭಾಗವಹಿಸಿದವು.